ADVERTISEMENT

ಪ್ರವೀಣ್‌ ಕುಮಾರ್‌ ಕೇಂದ್ರ ಜಾಗೃತ ಆಯೋಗದ ನೂತನ ಆಯುಕ್ತ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:04 IST
Last Updated 29 ಮೇ 2023, 15:04 IST
ಕೇಂದ್ರ ಜಾಗೃತ ಆಯೋಗದ ನೂತನ ಆಯುಕ್ತ ಪ್ರವೀಣ್‌ ಕುಮಾರ್‌ ಶ್ರೀವಾಸ್ತವ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು
ಕೇಂದ್ರ ಜಾಗೃತ ಆಯೋಗದ ನೂತನ ಆಯುಕ್ತ ಪ್ರವೀಣ್‌ ಕುಮಾರ್‌ ಶ್ರೀವಾಸ್ತವ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು   

ನವದೆಹಲಿ: ಕೇಂದ್ರ ಜಾಗೃತ ಆಯೋಗದ (ಸಿವಿಸಿ) ನೂತನ ಆಯುಕ್ತರಾಗಿ ಪ್ರವೀಣ್‌ ಕುಮಾರ್‌ ಶ್ರೀವಾಸ್ತವ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. 

ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನೂತನ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಶ್ರೀವಾಸ್ತವ ಅವರು ಕಳೆದ ವರ್ಷದ ಡಿಸೆಂಬರ್‌ನಿಂದ ಪ್ರಭಾರ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 1988ನೇ ಬ್ಯಾಚ್‌ನ ಅಸ್ಸಾಂ–ಮೇಘಾಲಯ ಕೆಡರ್‌ನ ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದಾರೆ. ಕೇಂದ್ರ ಸಂಪುಟ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕಳೆದ ವರ್ಷದ ಜನವರಿಯಲ್ಲಿ ಅವರು ನಿವೃತ್ತರಾಗಿದ್ದರು. 

ADVERTISEMENT

ಆಯೋಗದಲ್ಲಿ ಮುಖ್ಯಸ್ಥರು ಹಾಗೂ ಇಬ್ಬರು ಆಯುಕ್ತರು ಇರುತ್ತಾರೆ. ಇವರ ಅಧಿಕಾರಾವಧಿಯು ನಾಲ್ಕು ವರ್ಷ ಅಥವಾ ಅವರಿಗೆ 65 ವರ್ಷ ಪೂರ್ಣಗೊಳ್ಳುವವರೆಗೆ ಇರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.