ADVERTISEMENT

ದೆಹಲಿ ವಿಳಾಸವುಳ್ಳ ಮತದಾರರ ಗುರುತಿನ ಚೀಟಿ ಪಡೆದ ರಾಷ್ಟ್ರಪತಿ ಮುರ್ಮು

ಪಿಟಿಐ
Published 28 ನವೆಂಬರ್ 2023, 12:44 IST
Last Updated 28 ನವೆಂಬರ್ 2023, 12:44 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು </p></div>

ರಾಷ್ಟ್ರಪತಿ ದ್ರೌಪದಿ ಮುರ್ಮು

   

ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಒಡಿಶಾದಿಂದ ನವದೆಹಲಿಗೆ ಬದಲಿಸಿದ್ದಾರೆ.

ADVERTISEMENT

ದೆಹಲಿ ವಿಳಾಸವಿರುವ ಮತದಾರರ ಗುರುತಿನ ಹೊಸ ಚೀಟಿಯನ್ನು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಪಿ.ಕೃಷ್ಣಮೂರ್ತಿ ಅವರು ರಾಷ್ಟ್ರಪತಿ ಅವರಿಗೆ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನೀಡಿದ್ದಾರೆ.

ಇದರಿಂದಾಗಿ ಮುಂಬರುವ ಚುನಾವಣೆಗಳಲ್ಲಿ ರಾಷ್ಟ್ರಪತಿ ಮುರ್ಮು ಅವರು ನವದೆಹಲಿ ಜಿಲ್ಲೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಇಲಾಖೆ ಹೇಳಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ರಾಷ್ಟ್ರಪತಿ ಅವರಿಗೆ ತಮ್ಮ ಭೇಟಿ ಸಂದರ್ಭದಲ್ಲಿ ಕೃಷ್ಣಮೂರ್ತಿ ವಿವರಿಸಿದ್ದಾರೆ. 

ಮುರ್ಮು ಅವರ ಮತದಾರರ ಗುರುತಿನ ಚೀಟಿಯ ಹಿಂದಿನ ವಿಳಾಸ ಒಡಿಶಾದ ಮಯೂರಭಂಜ್‌ ವಿಳಾಸದ್ದಾಗಿತ್ತು. ನವೆಂಬರ್‌ ಮೊದಲ ವಾರದಲ್ಲಿ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಮುಖ್ಯ ಚುನಾವಣಾಧಿಕಾರಿ ಅವರು ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾವಣೆ ಕಾರ್ಯವನ್ನು ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.