ADVERTISEMENT

ಫೆ.19ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ರಾಷ್ಟ್ರಪತಿ ಮುರ್ಮು ಭೇಟಿ

ಪಿಟಿಐ
Published 10 ಫೆಬ್ರುವರಿ 2024, 10:27 IST
Last Updated 10 ಫೆಬ್ರುವರಿ 2024, 10:27 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು </p></div>

ರಾಷ್ಟ್ರಪತಿ ದ್ರೌಪದಿ ಮುರ್ಮು

   

ಪಿಟಿಐ ಚಿತ್ರ

ಪೋರ್ಟ್‌ ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ಫೆಬ್ರುವರಿ 19ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ರಾಷ್ಟ್ರಪತಿಯಾದ ಬಳಿಕ ದ್ವೀಪಕ್ಕೆ ಮುರ್ಮ ಅವರ ಮೊದಲ ಭೇಟಿ ಇದಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ದಿನಗಳ ವಾಸ್ತವ್ಯ ಹೂಡಲಿದ್ದಾರೆ.

ಫೆಬ್ರುವರಿ 19ರಂದು ಮಧ್ಯಾಹ್ನ 1 ಗಂಟೆಗೆ ಪೋರ್ಟ್‌ ಬ್ಲೇರ್‌ನಲ್ಲಿರುವ ನೌಕಾ ನೆಲೆ ಐಎನ್‌ಎಸ್‌ ಉತ್ಕರ್ಷಗೆ ರಾಷ್ಟ್ರಪತಿ ಮುರ್ಮು ಆಗಮಿಸಲಿದ್ದಾರೆ. ಲೆಫ್ಟಿನೆಂಟ್‌ ಗರ್ವನರ್‌ ಅಡ್ಮಿರಲ್‌ (ನಿವೃತ್ತ) ಡಿ. ಕೆ ಜೋಶಿ ಅವರು ರಾಷ್ಟ್ರಪತಿಯನ್ನು ಬರಮಾಡಿಕೊಳ್ಳಲಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಕಮಾಂಡರ್‌ ಇನ್ ಚೀಫ್‌ ಕೂಡಾ ಆಗಿರುವ ಏರ್ ಮಾರ್ಷಲ್ ಸಾಜು ಬಾಲಕೃಷ್ಣನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಫೆಬ್ರುವರಿ 19 ರಿಂದ 23ವರೆಗಿನ ಐದು ದಿನಗಳ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಪ್ರವಾಸದಲ್ಲಿ, ಸೆಲ್ಯೂಲರ್‌ ಜೈಲ್‌, ಸ್ವರಾಜ್‌ ದ್ವೀಪ, ಕ್ಯಾಂಪ್ಬೆಲ್ ಬೇ, ಇಂದಿರಾ ಪಾಯಿಂಟ್‌ ಸೇರಿದಂತೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ದ್ವೀಪಕ್ಕೂ ಮುರ್ಮು ಭೇಟಿ ನೀಡಲಿದ್ದಾರೆ. ಜತೆಗೆ ವಿವಿಧ ಸಮುದಾಯಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ದ್ವೀಪಕ್ಕೆ ರಾಷ್ಟ್ರಪತಿ ಭೇಟಿ ನೀಡುತ್ತಿರುವ ಹಿನ್ನೆಲೆ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪ್ಯಾರಾ ಗ್ಲೈಡರ್‌ಗಳು, ಪ್ಯಾರಾ ಮೋಟಾರ್‌ಗಳು, ಹ್ಯಾಂಡ್‌ ಗ್ಲೈಡರ್‌ಗಳು, ಮಾನವರಹಿತ ವೈಮಾನಿಕ ಉಪಕರಣಗಳು, ಮೈಕ್ರೋಲೈಟ್‌ ಏರ್‌ಕ್ರಾಫ್ಟ್‌, ಹಾಟ್‌ ಏರ್‌ ಬಲೂನ್‌ಗಳು ಸೇರಿದಂತೆ ಇತರ ವೈಮಾನಿಕ ವಸ್ತುಗಳ ಬಳಕೆಯನ್ನು ಭದ್ರತಾ ಸಂಸ್ಥೆ ನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.