ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಧೀರ್ಘಕಾಲದ ಸಹಾಯಕ ರಾನ್ ಕ್ಲೈನ್ ಅವರನ್ನು ಶ್ವೇತಭವನದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಕ್ಲೈನ್ ಅವರು ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುವ ಜತೆಗೆ, ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಲಿದ್ದಾರೆ.
‘ಇದರ ಜತೆಗೆ, ಕ್ಲೈನ್ ಅವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ದೇಶ ಎದುರಿಸುತ್ತಿರುವ ತುರ್ತು ಸವಾಲುಗಳನ್ನು ಎದುರಿಸಲು ಸಲಹೆ ನೀಡುವಂತಹ ಹಾಗೂ ಅನುಭವಿ, ಪ್ರತಿಭಾವಂತ ತಂಡಡದೊಂದಿಗೆ ಕೆಲಸ ಮಾಡುತ್ತಾರೆ‘ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.
‘ನಾನು ಮತ್ತು ರಾನ್ ಧೀರ್ಘಕಾಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರೊಟ್ಟಿಗೆ ಕೆಲಸ ಮಾಡಿರುವ ಸಮಯ ನನಗೆ ಅಮೂಲ್ಯವಾದುದು. 2009ರಲ್ಲಿ ಅಮೆರಿಕವನ್ನು ಭೀಕರ ಆರ್ಥಿಕ ಕುಸಿತದಿಂದ ರಕ್ಷಿಸಿದ್ದೇವೆ. ನಂತರ 2014 ರಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಹದಗೆಟ್ಟಾಗ, ಅದನ್ನು ನಿವಾರಿಸಲು ಕೆಲಸ ಸಮಾಡಿದ್ದೇವೆ‘ ಎಂದು ಬೈಡನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.