ADVERTISEMENT

ರಾಮಾನುಜಾಚಾರ್ಯರ ಚಿನ್ನದ ಮೂರ್ತಿ: ರಾಷ್ಟ್ರಪತಿಯಿಂದ ಭಾನುವಾರ ಅನಾವರಣ 

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 10:59 IST
Last Updated 12 ಫೆಬ್ರುವರಿ 2022, 10:59 IST
ರಾಮಾನುಜಾಚಾರ್ಯರ ಪ್ರತಿಮೆ (ಸಮಾನತೆಯ ಪ್ರತಿಮೆ)
ರಾಮಾನುಜಾಚಾರ್ಯರ ಪ್ರತಿಮೆ (ಸಮಾನತೆಯ ಪ್ರತಿಮೆ)   

ಹೈದರಾಬಾದ್‌ (ಪಿಟಿಐ): ಇಲ್ಲಿನ ‘ಸಮಾನತೆಯ ಪ್ರತಿಮೆ’ ಆವರಣದಲ್ಲಿ ಸ್ಥಾಪಿಸಲಾಗಿರುವ ಧಾರ್ಮಿಕ ಸುಧಾರಕ ರಾಮಾನುಜಾಚಾರ್ಯರ ಚಿನ್ನದ ಮೂರ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾನುವಾರ ಅನಾವರಣಗೊಳಿಸಲಿದ್ದಾರೆ.54 ಇಂಚು ಎತ್ತರವಿರುವ ಈ ಮೂರ್ತಿಯನ್ನು 120 ಕೆ.ಜಿ ಚಿನ್ನದಿಂದ ನಿರ್ಮಿಸಲಾಗಿದೆ.

‘ಜೀವಾ’ ಆಶ್ರಮವನ್ನು ಭಾನುವಾರ ಮಧ್ಯಾಹ್ನ 3.30ಕ್ಕೆ ತಲುಪಲಿರುವ ರಾಷ್ಟ್ರಪತಿ ಅವರು, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸಮಾನತೆಯ ಪ್ರತಿಮೆ’ ಎಂದು ಗುರುತಿಸಲಾಗಿರುವ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆ.5ರಂದು ಅನಾವರಣಗೊಳಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.