ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ದಿನ ಗುಜರಾತ್‌ನ ಅಹಮದಾಬಾದ್‌ನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಭಾರತದೊಂದಿಗೆ ಅಮೆರಿಕ ನಂಟು, ಭಾರತದ ಸಂಸ್ಕೃತಿ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡುತ್ತಿದ್ದ ಟ್ರಂಪ್ ತಮ್ಮ ಭಾಷಣದಲ್ಲಿ ಹಲವು ತಪ್ಪು ಉಚ್ಚಾರಣೆಗಳನ್ನು ಮಾಡಿದ್ದರು. ಇದು ಸದ್ಯ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ಟ್ರಂಪ್ ಅವರಿಂದ ತಪ್ಪಾಗಿ ಹೊರಳಿದ ಮಾತುಗಳೇನು?
ನುಮುಸ್ತೆ – ನಮಸ್ತೆ
ಅಬಾಬಾದ್– ಅಹಮದಾಬಾದ್
ಚೀ ವಾಲಾ – ಚಾಯ್ ವಾಲಾ
ಗುಜಾತ್ – ಗುಜರಾತ್
ಶೋಜೆ – ಶೋಲೆ
ಸ್ವಾಮಿ ವಿವೇ – ಕಾ– ಮುನಂದ – ಸ್ವಾಮಿ ವಿವೇಕಾನಂದ
ಸುಚಿನ್ ತೆಂಡುಲ್ಕರ್ – ಸಚಿನ್ ತೆಂಡುಲ್ಕರ್
ಚಂದ್ರಜ್ಯಾನ್ – ಚಂದ್ರಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.