ಬೀಜಿಂಗ್: ಚೀನಾ ಹೊಸದಾಗಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಬೀಡುಬಿಟ್ಟಿರುವ ಮೂವರು ಗಗನಯಾತ್ರಿಗಳೊಂದಿಗೆ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬುಧವಾರ ದೂರವಾಣಿ ಮೂಲಕ ಮಾತನಾಡಿದರು.
ಇದು ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳೊಂದಿಗೆ ಷಿ ಜಿನ್‌ಪಿಂಗ್ ಅವರ ಮೊದಲ ಸಂಪರ್ಕವಾಗಿದೆ. ಈ ಐದು ನಿಮಿಷದ ಕರೆಯಲ್ಲಿ ಷಿ ಜಿನ್‌ಪಿಂಗ್ ಅವರು, ‘ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮದಲ್ಲಿ ಈ ಯೋಜನೆಯು ಪ್ರಮುಖ ಮೈಲಿಗಲ್ಲು ಆಗಿದೆ’ ಎಂದು ಹೇಳಿದರು. ಈ ಸಂವಾದವನ್ನು ಸರ್ಕಾರಿ ವಾಹಿನಿಯು ನೇರ ಪ್ರಸಾರ ಮಾಡಿತು.
ಗಗನಯಾತ್ರಿಗಳಾದ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಅವರೊಂದಿಗೆ ಬೀಜಿಂಗ್ ಏರೋಸ್ಪೇಸ್ ಕಂಟ್ರೋಲ್ ಸೆಂಟರ್ ಮೂಲಕ ಮಾತುಕತೆ ನಡೆಸಿದರು.
‘ನೀವು ಮೂರು ತಿಂಗಳುಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದೀರಿ. ನಿಮ್ಮ ಕೆಲಸಗಳು ಸದಾ ಜನರ ಮನಸ್ಸಿನಲ್ಲಿ ಇರಲಿದೆ. ನಮ್ಮದೇ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವು ಪ್ರಮುಖ ಮೈಲಿಗಲ್ಲು ಆಗಿದೆ. ಇದು ಮಾನವಕುಲಕ್ಕೆ ಶಾಂತಿಯುತವಾಗಿ ಬಾಹ್ಯಾಕಾಶವನ್ನು ಬಳಸಲು ನಾವು ನೀಡುತ್ತಿರುವ ಮಹತ್ವದ ಕೊಡುಗೆಯಾಗಿದೆ’ ಎಂದು ಅವರು ಗಗನಯಾತ್ರಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.