ADVERTISEMENT

'ಯು ಟರ್ನ್ ಬಾಬು' ಅವರು ರೈತರ ಬಗ್ಗೆ ಯೋಚಿಸುವುದಿಲ್ಲ: ಆಂಧ್ರದಲ್ಲಿ ಮೋದಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 12:53 IST
Last Updated 1 ಏಪ್ರಿಲ್ 2019, 12:53 IST
   

ರಾಜಮುಂದ್ರಿ: ಕೃಷ್ಣಾ ಮತ್ತು ಗೋದಾವರಿಯ ನಾಡಿನ ಈ ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.ನಿಮ್ಮೆಲ್ಲರ ಆಶೀರ್ವಾದದಿಂದಲೇ ನಾನು ಈ ಐದು ವರ್ಷಗಳಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಆಂಧ್ರ ಪ್ರದೇಶದ ರಾಜಮುಂದ್ರಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಾಮಾಣಿಕ ತೆರಿಗೆದಾರರ ಸಹಾಯದಿಂದ ನಾವು ರಾಜಮುಂದ್ರಿ ಮತ್ತು ಆಂಧ್ರ ಪ್ರದೇಶದಲ್ಲಿ ಕೃಷಿ, ಶಿಕ್ಷಣ, ಸಂಪರ್ಕ ಮತ್ತು ಕೈಗಾರಿಕಾ ಮೂಲಸೌಕರ್ಯಗಳನ್ನು ಹೆಚ್ಚು ಬಲಗೊಳಿಸುವಂತಾಯಿತು ಎಂದಿದ್ದಾರೆ ಮೋದಿ.

ಪೊಲಾವರಂ ಯೋಜನೆ ಬಗ್ಗೆ ಮಾತನಾಡಿ ಚಂದ್ರ ಬಾಬು ನಾಯ್ಡು ವಿರುದ್ಧ ಕಿಡಿ ಕಾರಿದ ಮೋದಿ, ಯುಟರ್ನ್ ಬಾಬು ಅವರಿಗೆ ಈ ಯೋಜನೆ ಎಟಿಎಂನಂತೆ ಎಂದಿದ್ದಾರೆ. ಬಿಜೆಪಿಗೆ ಮಾತ್ರ ಆಂಧ್ರಪ್ರದೇಶದ ಪರಂಪರೆಯವನ್ನು ಕಾಪಾಡಲು ಸಾಧ್ಯ.ಯು ಟರ್ನ್ ಬಾಬು ಅವರ ಸ್ವಂತ ಪರಂಪರೆಯನ್ನು ಉಳಿಸುವುದರಲ್ಲಿ ತಲ್ಲೀನರಾಗಿದ್ದಾರೆ.ಆಂಧ್ರದ ಪರಂಪರೆಯೇ ಪ್ರಾಮಾಣಿಕತೆ, ಆದರೆ ನಾಯ್ಡು ಅವರ ಪರಂಪರೆ ಮೋಸದ್ದು. ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ.

ADVERTISEMENT

ಯು ಟರ್ನ್ ಬಾಬು ಅವರು ರೈತರ ಬಗ್ಗೆ ಯೋಚಿಸುವುದಿಲ್ಲ. ಅವರ ಇಷ್ಟದ ಕೆಲಸ ಅಂದರೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅವರದ್ದೇ ಯೋಜನೆ ಎಂದು ಹೇಳಿಕೊಳ್ಳುವುದು. ಪಿಎಂ ಕಿಸಾನ್ ನಿಧಿ ಯೋಜನೆಯನ್ನು ಅವರು ಹಾಗೇ ಮಾಡಿದ್ದರು.

ಕಳೆದ ಐದು ವರ್ಷಗಳಲ್ಲಿ ನಾವು ತೆರಿಗೆ ಹೆಚ್ಚಳ ಮಾಡಿಲ್ಲ. ಆದರೆ ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿಯಿಂದ ಸಾಗಿದವು. ಹಿಂದಿನ ಸರ್ಕಾರ ರಫೇಲ್ ವಿಮಾನ ಖರೀದಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿಧಿ ಇಲ್ಲ ಎಂದು ಹೇಳುತ್ತಿದ್ದವು ಎಂದಿದ್ದಾರೆ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.