ADVERTISEMENT

ಎರಡು ದಿನದ ಪ್ರವಾಸ: ಭೂತಾನ್‌ಗೆ ಬಂದಿಳಿದ ಪ್ರಧಾನಿ ಮೋದಿ 

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 18:15 IST
Last Updated 17 ಆಗಸ್ಟ್ 2019, 18:15 IST
   

ಪಾರೊ: ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಮಾತುಕತೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದು, ಶನಿವಾರ ಇಲ್ಲಿ ಬಂದಿಳಿದರು.

ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್‌ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು. ಬಳಿಕ ಮೋದಿ ಅವರು ರಾಜಧಾನಿ ಥಿಂಪುವಿಗೆ ತೆರಳಿದರು. ಇದು ಮೋದಿ ಅವರ ಎರಡನೇ ಭೂತಾನ್‌ ಭೇಟಿಯಾಗಿದೆ.

’ಪಾರೊನಿಂದ ಥಿಂಪುವಿಗೆ ತೆರಳುವ ದಾರಿಯಲ್ಲಿ ಜನರು ಭಾರತದ ತ್ರಿವರ್ಣ ಧ್ವಜ ಮತ್ತು ಭೂತಾನ್‌ ಧ್ವಜ ಹಿಡಿದು ಮೋದಿ ಅವರನ್ನು ಸ್ವಾಗತಿಸಿದರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಭೂತಾನ್‌ ಭೇಟಿಯು, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಹಾಗೂ ಜನರ ಸಮೃದ್ಧ ಭವಿಷ್ಯ ಮತ್ತು ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಭೂತಾನ್‌ ರಾಜ ಜಿಗ್ಮೆ ಖೇಸರ್‌ ನಾಮ್‌ಗೇಲ್‌ ವಾಂಗ್‌ಚುಕ್‌ ಜೊತೆಗೆ ಮೋದಿ ಅವರು ಮಾತುಕತೆ ನಡೆಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.