ನವದೆಹಲಿ:ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆಕಿರ್ಗಿಸ್ತಾನಕ್ಕೆ ತೆರಳಿದರು.
ಇಂದು(ಗುರುವಾರ) ಮತ್ತು ನಾಳೆಬಿಷ್ಕೆಕ್‌ನಲ್ಲಿಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆ ನಡೆಯಲಿದೆ. ಎರಡು ದಿನಗಳುಶೃಂಗಸಭೆಯಲ್ಲಿ ಪಾಲ್ಗೊಳಲ್ಲಿರುವ ಮೋದಿ,ಎಸ್‌ಸಿಒ ದೇಶಗಳ ನಡುವಿನವ್ಯಾಪಾರ ಮತ್ತು ವಾಣಿಜ್ಯ ಬಾಂಧವ್ಯವನ್ನು ಮತ್ತುಷ್ಟು ಸುಧಾರಣೆಗೊಳಿಸಲಿದ್ದಾರೆಎನ್ನಲಾಗಿದೆ.
ಭಾರತ ಸರ್ಕಾರದ ವಿಶೇಷ ವಿಮಾನದ ಮೂಲಕ ತೆರಳಿದ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಶೃಂಗಸಭೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲಿದ್ದಾರೆ.
ಇದೇ ವೇಳೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಷಿ ಜಿನ್‌ಪಿಂಗ್ ಅವರು ಕಿರ್ಗಿಸ್ತಾನದಲ್ಲಿದ್ದರೆ ಎಂದು ಸರ್ಕಾರಿ ಮಾಧ್ಯಮಗಳ ವರದಿ ಮಾಡಿವೆ.
ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಪಡೆದ ನಂತರ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಷಿ ಜಿನ್‌ಪಿಂಗ್ ಹಾಗೂ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: ಮೋದಿ ವಿಮಾನಕ್ಕೆ ಪಾಕ್ ಪ್ರದೇಶ ಮುಕ್ತ: ಭಾರತ ನಿರಾಕರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.