ADVERTISEMENT

Gaganyaan Mission: ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2024, 8:27 IST
Last Updated 27 ಫೆಬ್ರುವರಿ 2024, 8:27 IST
<div class="paragraphs"><p> ಭಾರತದ&nbsp;ನಾಲ್ವರು ಗಗನಯಾತ್ರಿಗಳು&nbsp;</p></div>

ಭಾರತದ ನಾಲ್ವರು ಗಗನಯಾತ್ರಿಗಳು 

   

ತಿರುವನಂತಪುರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಪ್ರಕಟಿಸಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.

ADVERTISEMENT

ಕ್ಯಾಪ್ಟನ್ ಪಿ. ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್. ಶುಕ್ಲಾ ಅವರು ಕಕ್ಷೆಗೆ ಹಾರಲಿರುವ ಗಗನಯಾನಿಗಳಾಗಿದ್ದಾರೆ. ಇವರಿಗೆ ರೆಕ್ಕೆಗಳನ್ನು ನೀಡುವ ಮೂಲಕ ಮೋದಿ ಶುಭ ಕೋರಿದ್ದಾರೆ.

'ಗಗನಯಾತ್ರಿಗಳನ್ನು ಭೇಟಿ ಮಾಡಲು ಮತ್ತು ಅವರನ್ನು ದೇಶದ ಮುಂದೆ ಪರಿಚಯಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ನಾನು ಅವರನ್ನು ಇಡೀ ದೇಶದ ಪರವಾಗಿ ಅಭಿನಂದಿಸಲು ಬಯಸುತ್ತೇನೆ. ನೀವು (ಗಗನಯಾತ್ರಿಗಳು) ದೇಶದ ಹೆಮ್ಮೆ’ ಎಂದು ಮೋದಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.