ನವದೆಹಲಿ: ‘ದೇಶದ ಜನರು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾನು ಇಲ್ಲಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಅವರು, ‘ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಎನ್‌ಡಿಎ ಮತ್ತು ಬಿಜೆಪಿಯನ್ನು ಮಹಾ ವಿಜಯದ ಮೂಲಕ ಮರಳಿ ಅಧಿಕಾರಕ್ಕೆ ತರಲು ನೀವು (ವಿರೋಧ ಪಕ್ಷಗಳು) ನಿರ್ಧರಿಸಿರುವುದನ್ನು ನಾನು ಇಂದು ನೋಡುತ್ತಿದ್ದೇನೆ’ಎಂದು ಪ್ರಧಾನಿ ಮೋದಿ ಹೇಳಿದರು.
‘ಒಂದು ರೀತಿಯಲ್ಲಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವು ಯಾವಾಗಲೂ ನಮಗೆ ಅದೃಷ್ಟವಾಗಿದೆ. ಇಂದು ನೀವು (ವಿರೋಧ ಪಕ್ಷಗಳು) 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಅಭೂತಪೂರ್ವ ಜಯದೊಂದಿಗೆ ಮರಳಿ ಬರಲು ನಿರ್ಧರಿಸಿರುವುದನ್ನು ನಾನು ನೋಡುತ್ತಿದ್ದೇನೆ’ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ದೇವರು ತುಂಬಾ ಕರುಣಾಮಯಿ. ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾನೆ.ಪ್ರತಿಪಕ್ಷಗಳು ಈ ನಿರ್ಣಯವನ್ನು ತಂದಿರುವುದು ದೇವರ ಆಶೀರ್ವಾದ ಎಂದು ನಾನು ನಂಬುತ್ತೇನೆ. ನಾನು 2018ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಹೇಳಿದ್ದೆ. ಇದು ಸದನದಲ್ಲಿ ನಮ್ಮ ಪರೀಕ್ಷೆ ಅಲ್ಲ, ಬದಲಾಗಿ ಅವರ ಪರೀಕ್ಷೆ ಎಂದಿದ್ದೆ. ಪರಿಣಾಮವಾಗಿ ಅವರು ಕಳೆದ ಚುನಾವಣೆಯಲ್ಲಿ ಸೋತರು’ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.