ಕೋಲ್ಕತ್ತ: ಕೋಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ ಪ್ರಚಾರ ಬಯಸುವ ಪ್ರಧಾನಿ.ಜಿಎಸ್‍ಟಿ ಎಂಬುದು ಮೋಸ, ಆರ್ಥಿಕ ಅಭಿವೃದ್ಧಿ ನಿಂತುಹೋಗಿದೆ.ಈ ಸರ್ಕಾರ ಫೆಡರಲ್ ವ್ಯವಸ್ಥೆಯಲ್ಲಿ ಮೂಗು ತೂರಿಸುತ್ತಿದೆ ಎಂದಿದ್ದಾರೆ.
ನಮಗಿರುವುದು ಒಂದೇ ಗುರಿ.ಬಿಜೆಪಿ ದೇಶವನ್ನು ವಿಭಜಿಸಿದೆ.ನಾವು ದೇಶವನ್ನು ಒಂದುಗೂಡಿಸುತ್ತಿದ್ದೇವೆ. ಈ ಸ್ಥಳಕ್ಕೆ ಐತಿಹಾಸಿಕ ಮಹತ್ವವಿದೆ.ದೇಶಕ್ಕೆ ಆಪತ್ತು ಒದಗಿದಾಗ ಈ ಮೈದಾನದಲ್ಲಿ ರ‍್ಯಾಲಿ ನಡೆಯುತ್ತದೆ ಎಂದಿದ್ದಾರೆ ನಾಯ್ಡು.
2019ರಲ್ಲಿ ಮೋದಿ- ಶಾ ಅಧಿಕಾರಕ್ಕೆ ಬಂದರೆ ಅವರು ದೇಶನಿರ್ನಾಮ
2019ರಲ್ಲಿ ಮೋದಿ- ಶಾ ಮರಳಿ ಅಧಿಕಾರಕ್ಕೆ ಬಂದರೆ ಅವರು ಈ ದೇಶವನ್ನು ನಾಶ ಮಾಡುತ್ತಾರೆ. ಅವರು ದೇಶವನ್ನು ತುಂಡು ತುಂಡು ಮಾಡುತ್ತಾರೆ.ಹಿಟ್ಲರ್ ಮಾಡಿದಂತೆ ಅವರು ಮಾಡುತ್ತಾರೆ.ಅವರು ಸಂವಿಧಾನವನ್ನು ತಿದ್ದಿ, ಚುನಾವಣೆಯೇ ಇಲ್ಲದಂತೆ ಮಾಡುತ್ತಾರೆ. ಅವರನ್ನು ಬುಡ ಸಮೇತ ಕಿತ್ತೊಗೆಯ ಬೇಕು.
ದೇಶದಲ್ಲಿರುವ ಮಹಿಳೆಯರು, ರೈತರು ಈ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ.ದಲಿತರನ್ನು ಜನರ ಗುಂಪು ಹೊಡೆದು ಕೊಲ್ಲುತ್ತಿದೆ. ಮುಸ್ಲಿಮರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಕಿತ್ತು ಹಾಕಿ
ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಕಿತ್ತು ಹಾಕಿ ನಾವು ಬಂಗಾಳದಲ್ಲಿ ಅದೇ ರೀತಿ ಮಾಡುತ್ತೇವೆ ಎಂದು ಅಖಿಲೇಶ್ ಯಾದವ್‌ಗೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹೊಸ ವರ್ಷದಲ್ಲಿ ಹೊಸ ಪ್ರಧಾನಿ
ಈ ಹೊಸ ವರ್ಷ, ನಮಗೆ ಹೊಸ ಪ್ರಧಾನಿ ಬೇಕು.ಜನರ ಆಯ್ಕೆ ಮಾಡಿದವರು ಪ್ರಧಾನಿಯಾಗುತ್ತಾರೆ ಎಂದು ಹೇಳಿದ ಅಖಿಲೇಶ್ ಯಾದವ್, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವುದಿಲ್ಲ ಎಂದಿದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದೆ: ಎಚ್‌ಡಿಕೆ
ಬಿಜೆಪಿ ಕರ್ನಾಟಕದಲ್ಲಿ ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದೆ.ಶಾಸಕರನ್ನು ವಸ್ತುಗಳಂತೆ ಪರಿಗಣಿಸಲಾಗುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯವರಿಗೆ ಅಧಿಕಾರಶಾಹಿ ಧೋರಣೆ ಇದೆ.ಅವರ ಈ ಧೋರಣೆಯಿಂದಲೇ ಈ ದೇಶ ಹೀಗಾಗಿದೆ.ದೀದಿ ಈ ದೇಶಕ್ಕೆ ಮಾದರಿ ಆಗಿದ್ದಾರೆ. ದೀದಿಯಂತೆ ಸರಳ ಮತ್ತು ವಿನಮ್ರವಾಗಿರಬೇಕೆಂದು ನನ್ನ ಅಪ್ಪ ಎಚ್.ಡಿ ದೇವೇಗೌಡರು ನನಗೆ ಕಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.