ನವದೆಹಲಿ (ಎಎಫ್‌ಪಿ): ಲೈಂಗಿಕ ಕಿರುಕುಳ ಆರೋಪದಡಿ ಮಹಿಳೆಯೊಬ್ಬರ ದೂರು ಆಧರಿಸಿ ಕ್ವೀನ್ ಎಲಿಜಬೆತ್– 2 ಅವರ ಎರಡನೇ ಪುತ್ರ ಪ್ರಿನ್ಸ್ ಆ್ಯಂಡ್ರ್ಯೂಅವರ ವಿರುದ್ಧ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ.
‘ಹಣಕಾಸು ವಹಿವಾಟು ನಡೆಸುತ್ತಿದ್ದ ದಿವಂಗತ ಜೆಫ್ರಿ ಎಪ್‌ಸ್ಟೀನ್ ಎಂಬುವರು ಬಾಲಕಿಯಾಗಿದ್ದಾಗ ನನ್ನನ್ನು ನಿಯಮಿತವಾಗಿ ಲೈಂಗಿಕವಾಗಿ ಬಳುಸುತ್ತಿದ್ದರು. ಇದೇ ಉದ್ದೇಶಕ್ಕಾಗಿ ‘ಪ್ರಿನ್ಸ್ ಆ್ಯಂಡ್ರ್ಯೂ’ ಹೆಸರಿನ ಪ್ರಭಾವಿಯ ಬಳಿಗೂ ಕಳುಹಿಸಿಕೊಟ್ಟಿದ್ದರು‘ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಪ್ರಿನ್ಸ್ ಆ್ಯಂಡ್ರ್ಯೂ ಅವರನ್ನು ಆರೋಪಿಯಾಗಿ ಹೆಸರಿಸಿದ್ದು, ‘ಪ್ರಿನ್ಸ್ ಲಂಡನ್‌ನ ತನ್ನ ಮನೆಯಲ್ಲಿ 20 ವರ್ಷದ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಗ ನನಗೆ 18 ವರ್ಷವಾಗಿರಲಿಲ್ಲ’ ಎಂದಿದ್ದಾರೆ.
ಈ ಆರೋಪವನ್ನು 61 ವರ್ಷದ ಪ್ರಿನ್ಸ್ ಆ್ಯಂಡ್ರ್ಯೂ ನಿರಾಕರಿಸಿದ್ದಾರೆ. ಆಕೆಯನ್ನು ಭೇಟಿಯಾಗಿರುವ ನೆನಪೂ ನನಗಿಲ್ಲ. ಆದರೆ, ಈ ಆರೋಪಗಳು ಬ್ರಿಟೀಷ್ ರಾಜಮನೆತನದ ವರ್ಚಸ್ಸಿಗೆ ಧಕ್ಕೆ ತರುವಂತಹದ್ದಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.