ಮುಂಬೈ: ಮಹಾರಾಷ್ಟ್ರದ ಸತಾರ ಮೂಲದ ಪ್ರಿಯಾಂಕಾ ಮೋಹಿತೆ ಅವರು ಗುರುವಾರ ಕಾಂಚನಗಂಗಾ ಶಿಖರವನ್ನೇರಿದ್ದಾರೆ. ಈ ಮೂಲಕ 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದ ಐದು ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ತೇನ್‌ಸಿಂಗ್ ನೊರ್ಗೆ ಸಾಹಸ ಪ್ರಶಸ್ತಿ ಪುರಸ್ಕೃತೆ ಪ್ರಿಯಾಂಕಾ ಅವರು (30)ಗುರುವಾರ ಸಂಜೆ4.52ಕ್ಕೆವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಗಂಗಾದ (8,586 ಮೀ) ಪರ್ವತಾರೋಹಣವನ್ನು ಪೂರ್ಣಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.