ADVERTISEMENT

ನಿಷೇಧ ತೆರವು: ಅಗಸ್ತ್ಯಮಲೆಗೆ ಮಹಿಳೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 18:06 IST
Last Updated 14 ಜನವರಿ 2019, 18:06 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ತಿರುವನಂತಪುರ:ನಂಬಿಕೆಯ ಹೆಸರಿನಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸಿದ್ದ ಕೇರಳದ ಧಾರ್ಮಿಕ ಕ್ಷೇತ್ರ ಅಗಸ್ತ್ಯಮಲೆಯನ್ನು ಸೋಮವಾರ ಮಹಿಳೆಯೊಬ್ಬರು ಏರಿದ್ದಾರೆ.

ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕಿಧನ್ಯಾ ಸನಾಲ್‌ ಸದ್ಯ ರಕ್ಷಣಾ ಇಲಾಖೆ ವಕ್ತಾರರಾಗಿದ್ದಾರೆ. ತಿರುವನಂತಪುರದಿಂದ 40 ಕಿ.ಮೀ. ದೂರದಲ್ಲಿರುವ 1,868 ಮೀಟರ್‌ ಎತ್ತರದಅಗಸ್ತ್ಯಮಲೆಯನ್ನು ಅವರು ಏರಿದ್ದಾರೆ.

ಮಹಿಳೆಯರ ಪ್ರವೇಶ ನಿಷೇಧವನ್ನು ಹೈಕೋರ್ಟ್‌ ರದ್ದು ಪಡಿಸಿದ ನಂತರ ಬೆಟ್ಟ ಏರಿದ ಮೊದಲ ಮಹಿಳೆ ಇವರಾಗಿದ್ದಾರೆ. ಮಹಿಳೆಯು ಬೆಟ್ಟ ಏರಿದ್ದನ್ನು ವಿರೋಧಿಸಿಸ್ಥಳೀಯ ಕಣಿ ಬುಡಕಟ್ಟು ಜನರು ಪ್ರತಿಭಟನೆ ನಡೆಸಿದರು.

ADVERTISEMENT

ಬೆಟ್ಟದ ತುದಿಯಲ್ಲಿರುವ ದೇವಸ್ಥಾನಕ್ಕೆ ಅವರು ಹೋಗಲಿಲ್ಲ ಎಂದು ಹೇಳಲಾಗಿದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಹಾಗೆಯೇ ಅಗಸ್ತ್ಯಮಲೆಗೆ ನಂಬಿಕೆಯ ಹೆಸರಿನಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗುತ್ತು.ಅಗಸ್ತ್ಯಮಲೆಯ ತುದಿಯಲ್ಲಿ ಅಗಸ್ತ್ಯ ಮುನಿಯ ಮೂರ್ತಿ ಇದೆ. ಅಗಸ್ತ್ಯ ಮುನಿಯನ್ನು ಕೂಡ ಬ್ರಹ್ಮಚಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಗಸ್ತ್ಯ ಮುನಿಯ ದರ್ಶನ ಪಡೆಯಲು ಮಹಿಳೆಯರಿಗೆ ಅವಕಾಶ ನಿಷೇಧಿಸಲಾಗಿತ್ತು.

ನಿಷೇಧವನ್ನು ಪ್ರಶ್ನಿಸಿಎರಡು ಮಹಿಳಾ ಸಂಘಟನೆಗಳು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. 2018ರ ನವೆಂಬರ್‌ 30ರಂದು ನಿಷೇಧವನ್ನು ಹೈಕೋರ್ಟ್‌ ತೆರವುಗೊಳಿಸಿತ್ತು.

ಜನವರಿ– ಮಾರ್ಚ್‌ ತಿಂಗಳಿನ 45 ದಿನಗಳಲ್ಲಿ ಮಾತ್ರಬೆಟ್ಟ ಏರುವುದಕ್ಕೆ ಅವಕಾಶವಿದೆ. ಈ ವರ್ಷ ಜನವರಿ 14 ರಿಂದ ಮಾರ್ಚ್‌ 1ರ ವರೆಗೆಬೆಟ್ಟ ಏರಲು ಅವಕಾಶವಿದೆ. ಪ್ರತ್ಯೇಕ ತಂಡಗಳಲ್ಲಿ ದಿನಕ್ಕೆ ನೂರು ಜನರಿಗೆ ಮಾತ್ರ ಬೆಟ್ಟ ಏರಲು ಅನುಮತಿ ಇದೆ. ಚಾರಣ ಪೂರ್ತಿಗೊಳಿಸಲುಸುಮಾರು 24 ತಾಸು ಬೇಕಾಗುತ್ತದೆ. ರಾತ್ರಿ ತಂಗಲು ಅರಣ್ಯದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.