ಭದೇರ್ವಾ, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ತಲೆಮರೆಸಿಕೊಂಡಿದ್ದ ಪಾಕ್ ಮೂಲದ ಲಷ್ಕರ್ –ಇ–ತೈಯಬಾ ಸಂಘಟನೆಯ ಕಮಾಂಡರ್ ಅಬ್ದುಲ್ ರಶಿದ್ ಅಲಿಯಾಸ್ ಜೆಹಾಂಗೀರ್‌ಗೆ ಸೇರಿದ ಆಸ್ತಿಯನ್ನು ದೋಡಾ ಪ್ರದೇಶದಲ್ಲಿ ಜಮ್ಮು– ಕಾಶ್ಮೀರ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದನೆಯನ್ನು ನಡೆಸಲು ಈತ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೋಡಾ ಜಿಲ್ಲೆಯ ಥಾತ್ರಿ ಬಳಿಯ ಖಾನ್ಪುರ ಹಳ್ಳಿಯಲ್ಲಿ ನಾಲ್ಕು ಕನಾಲ್ (2023.24 ಚದರ ಮೀಟರ್) ಅಳತೆಯ ಜಾಗವನ್ನು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡ ಮುಟ್ಟುಗೋಲು ಹಾಕಿಕೊಂಡಿದೆ.
1993ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದ ಈತ ಐಇಡಿ ಸ್ಫೋಟ, ಶಸ್ತ್ರಾಸ್ತಗಳ ಕಳ್ಳಸಾಗಾಣಿಕೆ ಸೇರಿದಂತೆ ಅನೇಕ ವಿಧ್ವಂಸಕ ಕೃತ್ಯಗಳಿಗೆ ಮಾಸ್ಟರ್ ಮೈಂಡ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.