ನವದೆಹಲಿ:ತಕ್ಷಣವೇ ಗಲಭೆನಿಲ್ಲಿಸಿ ಶಾಂತಿ ಕಾಪಾಡುವಂತೆಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ದೆಹಲಿಯಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ ಮತ್ತು ಉತ್ತರ ಪ್ರದೇಶದಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಎಸ್.ಎ. ಬೊಬಡೆ, ಗಲಭೆ, ಹಿಂಸೆ ನಿಲ್ಲಿಸಿದ ಬಳಿಕ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದರು.
‘ಪ್ರತಿಭಟನೆನಡೆಸುತ್ತಿರುವವರು ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಇಲ್ಲ. ಈ ವಿಷಯವನ್ನು ಪ್ರತಿಭಟನೆ ಕಾವು ತಣ್ಣಗಾದ ಬಳಿಕ ನಿರ್ಧರಿಸಬೇಕಷ್ಟೆ. ಯಾವುದಕ್ಕೂ ಮೊದಲು ಪ್ರತಿಭಟನೆ ನಿಲ್ಲಿಸಿ’ ಎಂದು ಬೊಬಡೆ ಹೇಳಿದ್ದಾರೆ.
‘ಸ್ವತ್ತುಗಳನ್ನು ನಾಶ ಮಾಡಿದ್ದು ಯಾಕೆ? ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ನಾವು ಈ ಕುರಿತೂ ಗಮನಹರಿಸಲಿದ್ದೇವೆ ಮತ್ತು ಶಾಂತಿಯುತವಾಗಿ ನಿರ್ಧಾರ ಕೈಗೊಳ್ಳಲಿದ್ದೇವೆ. ಯಾರು ಮೊದಲು ಗಲಭೆ ಆರಂಭಿಸಿದರೋ ಅವರದನ್ನು ಮೊದಲು ನಿಲ್ಲಿಸಲಿ’ ಎಂದು ಅವರು ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.
ವಿದ್ಯಾರ್ಥಿಗಳ ಮೇಲಿನ ಹಿಂಸೆ ಕುರಿತು ಗಮನಹರಿಸುವಂತೆ ಮತ್ತು ಎರಡೂ ವಿಶ್ವವಿದ್ಯಾಲಯಗಳಿಗೆ ತನಿಖೆಗಾಗಿ ನಿವೃತ್ತ ಜಡ್ಜ್‌ಗಳನ್ನು ಕಳುಹಿಸುವಂತೆ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಕಾಲಿನ್ ಗೋನ್ಸಾಲ್‌ವ್ಸ್ ಮನವಿ ಮಾಡಿದ್ದರು.
ಇದನ್ನೂ ಓದಿ:ದೆಹಲಿಗೆ ವಿಸ್ತರಿಸಿದ ‘ಪೌರತ್ವ’ ಕಿಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.