ವಿಶಾಖಪಟ್ಟಣ: ಅನಿಲ ಸೋರಿಕೆ ದುರಂತಕ್ಕೆ ಕಾರಣವಾದ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯನ್ನು ಮುಚ್ಚುವಂತೆ ಆರ್.ಆರ್. ವೆಂಕಟಪುರ ಗ್ರಾಮಸ್ಥರು ಕಾರ್ಖಾನೆಯ ಮುಂಭಾಗ ಪಟ್ಟು ಹಿಡಿದಿದ್ದರಿಂದ, ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.
ಸ್ಪೆರೇನ್ ವೇಪೂರ್ ಅನಿಲ ಸೋರಿಕೆಯಿಂದ ಊರು ಬಿಟ್ಟಿದ ಗ್ರಾಮಸ್ಥರು ಶನಿವಾರ ಮರಳಿ ಬಂದರು. ಅವರೆಲ್ಲರೂ ಒಟ್ಟಾಗಿ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿದರು.
ಕಾರ್ಖಾನೆಗೆ ಡಿಜಿಪಿ ಸಾವಂಗ್ ಭೇಟಿ ನೀಡುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರು ಹಾಜರಿದ್ದರು. ಕಾರ್ಖಾನೆಯ ಸಮೀಪ ಗ್ರಾಮಸ್ಥರು ಸುಳಿಯದಂತೆ ಪೊಲೀಸರು ಕ್ರಮ ಕೈಗೊಂಡರಾದರೂ,
ಸಫಲವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.