ADVERTISEMENT

ಚನ್ನೈ -ಮಧುರೈ ವಿಮಾನದಲ್ಲಿ ಪ್ರಯಾಣಿಕರಿಗೆ ಆತಂಕ ಸೃಷ್ಟಿಯಾಗಿದ್ದು ಯಾಕೆ ಗೊತ್ತಾ ?

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 6:19 IST
Last Updated 31 ಮಾರ್ಚ್ 2019, 6:19 IST
ಇಂಡಿಗೋ ವಿಮಾನ 
ಇಂಡಿಗೋ ವಿಮಾನ    

ಚನ್ನೈ: ಮಧುರೈಗೆ ಹೋಗುತ್ತಿದ್ದ ವಿಮಾನದಲ್ಲಿಇದ್ದಕ್ಕಿದ್ದಂತೆ ಪ್ರಯಾಣಿಕರಿಗೆ ಎದುರಾಯಿತು ಆತಂಕ, ಮಹಿಳೆಯರು ಮಕ್ಕಳು ಗಾಬರಿಯಾಗಿ ಕ್ಷಣಕಾಲ ಭಯಭೀತರಾದದ್ದು ಯಾಕೆ ಗೊತ್ತಾ ?

ಬೇಡಿಕೆ ಈಡೇರಿಕೆಗಾಗಿ ರೈಲು ತಡೆ, ಬಸ್ ತಡೆದು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ಆದರೆ, ವಿಮಾನ ಹತ್ತಿ ಪ್ರತಿಭಟನೆ ನಡೆಸಿದ್ದನ್ನುನೀವು ನೋಡಿದ್ದೀರಾ?ಇಂತಹದ್ದೊಂದು ಘಟನೆ ಚನ್ನೈನಿಂದ ಮಧುರೈಗೆ ಬಂದ ವಿಮಾನದಲ್ಲಿ ನಡೆದಿದೆ. ಹೀಗೆ ಮಾಡುವ ಮೂಲಕ ಅಲ್ಲಿದ್ದ ಪ್ರಯಾಣಿಕರನ್ನು ಆತಂಕಕ್ಕೆ ಈಡುಮಾಡಿದ ಪ್ರಸಂಗ ಇದಾಗಿದೆ.

ಇದು ನಡೆದಿದ್ದು ಚನ್ನೈನಿಂದ ಮಧುರೈಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ.ಶನಿವಾರ ಮಧ್ಯಾಹ್ನಮಧುರೈಗೆ ವಿಮಾನ ಹೊರಟಿತ್ತು. ವಿಮಾನದ ಸೀಟುಗಳಲ್ಲಿಅರ್ಧದಷ್ಟು ಪ್ರಯಾಣಿಕರಿದ್ದರು. ವಿಮಾನ ಹೊರಟು ಆಕಾಶದಲ್ಲಿ ಹಾರುತ್ತಾ ಸಾಗಿತ್ತು. ನಿಶ್ಯಬ್ಧವಾಗಿದ್ದ ವಿಮಾನದಲ್ಲಿ ಇದ್ದಕ್ಕಿದ್ದಂತೆ ಕೆಲ ಮಂದಿ ಜೋರಾಗಿ ಏನೇನೋ ಘೋಷಣೆಗಳನ್ನುಕೂಗಲಾರಂಭಿಸಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಸಹಪ್ರಯಾಣಿಕರು ದಿಗ್ಭ್ರಾಂತರಾದರು. ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಗೊಂದಲ, ಗದ್ದಲ ಏರ್ಪಟ್ಟಿತ್ತು. ವಿಮಾನದಲ್ಲಿದ್ದ ಮಹಿಳೆಯರು, ಮಕ್ಕಳು ಆತಂಕಗೊಂಡರು.ಕೂಡಲೆ ಎಲ್ಲರನ್ನೂ ಸಮಾಧಾನಪಡಿಸಿದ ಸಿಬ್ಬಂದಿ ಪರಿಸ್ಥಿತಿಯನ್ನು ತಹಬಂದಿಗೆ ತರುವಷ್ಟರಲ್ಲಿಹೈರಾಣಾಗಿ ಹೋಗಿದ್ದರು. ನಂತರ ನಿಮ್ಮ ಸಮಸ್ಯೆ ಏನೆಂದು ಕೇಳಿದಾಗ ಪ್ರತಿಭಟನಾಕಾರರು ನಡೆದ ಸಂಗತಿ ಹಾಗೂ ಕಾರಣಗಳನ್ನು ವಿವರಿಸಿದರು.

ADVERTISEMENT

ತಮಿಳುನಾಡಿನಲ್ಲಿ 'ಥೇವರ್' ಜನಾಂಗ ಪ್ರಮುಖಜನಾಂಗ. ಪ್ರತಿಭಟನಾಕಾರರು ಈ ಜನಾಂಗದವರಾಗಿದ್ದು, ಮಧುರೈ ವಿಮಾನ ನಿಲ್ದಾಣಕ್ಕೆ ಅವರ ಜನಾಂಗದ ನಾಯಕ 'ಯು.ಮುತ್ತುರಾಮಲಿಂಗ ಥೇವರ್' ಎಂಬುವರ ಹೆಸರಿಡಬೇಕೆಂದು ಹಲವಾರು ಬಾರಿ ಒತ್ತಾಯಿಸಿದ್ದಾರೆ. ಆದರೂ ರಾಜ್ಯ ಸರ್ಕಾರಗಳಾಗಲಿ, ಕೇಂದ್ರ ಸರ್ಕಾರವಾಗಲಿ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಅದಕ್ಕಾಗಿ ನಾವುಸರ್ಕಾರಗಳನ್ನು ಗಮನಸೆಳೆಯಲು ಹಾಗೂ ಈ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಚನ್ನೈನಿಂದ ವಿಮಾನ ಹತ್ತಿ ಮಧುರೈ ತಲುಪುವವರೆಗೆ ಪ್ರತಿಭಟನೆ ನಡೆಸಬೇಕೆಂದು ಯೋಚಿಸಿದೆವು, ಅದರಂತೆ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು. ವಿಷಯ ತಿಳಿದ ನಂತರಸಿಬ್ಬಂದಿ ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಏನೇ ಆಗಲಿ ನೀವು ಪ್ರತಿಭಟನೆ ಮಾಡಬೇಕಾದರೆ, ಭೂಮಿಯಲ್ಲಿ ನಿಮ್ಮ ಪ್ರತಿಭಟನೆ ನಡೆಸಿ ಆದರೆ, ವಿಮಾನದ ಒಳಗೆ ನಡೆಸುವುದು ಅಪರಾಧ ಅದಕ್ಕಾಗಿ ನೀವು ಕಾನೂನು ಕ್ರಮ ಎದುರಿಸಲೇಬೇಕು ಎಂದಇಂಡಿಗೋ ವಿಮಾನದ ಸಿಬ್ಬಂದಿ 12 ಮಂದಿಯನ್ನು ಹಿಡಿದು ಮಧುರೈ ಜಿಲ್ಲಾ ಪೊಲೀಸರಿಗೆ ಒಪ್ಪಿಸಿದರು. ಕೂಡಲೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.

ಯು.ಮುತ್ತುರಾಮಲಿಂಗ ಥೇವರ್ 19963ರಲ್ಲಿಯು.ಮುತ್ತು ರಾಮಲಿಂಗ ಅವರು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಇಎಫ್ ಬಿ) ನಿಂದ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದವರು. ಇವರು ಥೇವರ್ ಜನಾಂಗಕ್ಕೆ ಸೇರಿದವರು. ಇವರ ನೆನಪಿಗಾಗಿ ಮಧುರೈ ವಿಮಾನ ನಿಲ್ದಾಣಕ್ಕೆ ಇವರ ಹೆಸರು ನಾಮಕರಣ ಮಾಡಬೇಕೆಂದು ಹಲವು ಬಾರಿಒತ್ತಾಯಿಸುತ್ತಾ ಬಂದಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರು ವಿಭಜಿತ ಎಇಎಫ್ ಬಿ ಸಂಘಟನಯಾದ ಭಾರತೀಯ ಫಾರ್ವರ್ಡ್ ಬ್ಲಾಕ್ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕರ್ತರು. ಪ್ರತಿಭಟನೆಯಲ್ಲಿ ಘಟಕದ ಅಧ್ಯಕ್ಷ ಕೂಡ ಬಂಧಿತ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನರಸಿಂಹವರ್ಮನ್ ಈ ಘಟನೆ ನಡೆದಿದ್ದು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂದಿದ್ದಾರೆ.

ಮಧುರೈ ವಿಮಾನ ನಿಲ್ದಾಣಕ್ಕೆ ಹೊಸ ನಾಮಕರಣ ಮಾಡಬೇಕೆಂಬುದು ಹಳೆಯ ವಿಚಾರ, ಆದರೆ, ಫೆಬ್ರವರಿಯಲ್ಲಿ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ , ಮುಕ್ಕುಲತು ಪುಲಿಗಳ್ ಹಾಗೂ ಹಲವು ಸಂಘಟನೆಗಳು ಸೇರಿ ರೈಲು ತಡೆ ನಡೆಸಿ ಥೇವರ್ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದವು. ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದರು. ಸುಬ್ರಮಣಿಯನ್ ಸ್ವಾಮಿ ಅವರು ಥೇವರ್ ಜನಾಂಗವರೇ ಹೆಚ್ಚು ವಾಸಿಸುವ ಮಧುರೈ ಜಿಲ್ಲೆಯ ಶೋಲವಂಧನ್ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. 'ನಾನು ಕೂಡ ಮಧುರೈ ವಿಮಾನನಿಲ್ದಾಣಕ್ಕೆ 'ಥೇವರ್' ಹೆಸರು ನಾಮಕರಣ ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದೇನೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಸಿದ್ಧವಿಲ್ಲ'ಎಂದು ಕಳೆದ ವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಪ್ರತಿಭಟನಾಕಾರರನ್ನುನಂತರ ಮುಚ್ಚಳಿಕೆ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.