ಟೆಹರಾನ್: ಇರಾನ್‌ನಲ್ಲಿ ಮಹಿಳೆಯರಿಗೆ ಹಿಜಾಬ್ ಕಡ್ಡಾಯಗೊಳಿಸಿರುವ ಕಾನೂನನ್ನು ಪರಿಶೀಲಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ.
ಹಿಜಾಬ್ ಕಡ್ಡಾಯ ಕಾನೂನಿನ ಬದಲಾವಣೆಯ ಅಗತ್ಯವಿದೆಯೇ ಎಂಬುದರ ಕುರಿತು‘ಸಂಸತ್ತು ಮತ್ತು ನ್ಯಾಯಾಂಗ ವ್ಯವಸ್ಥೆ ಎರಡೂ ಒಟ್ಟಾಗಿ ಕೆಲಸ ಮಾಡುತ್ತಿವೆ’ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಫರ್ ಮೊಂಟಜೇರಿ ಹೇಳಿದ್ದಾರೆ.
‘ಈ ಕುರಿತ ಪರಿಶೀಲನಾ ತಂಡವು ಬುಧವಾರ ಸಂಸತ್ತಿನ ಸಂಸ್ಕೃತಿ ಆಯೋಗವನ್ನು ಭೇಟಿ ಮಾಡಿದೆ. ಒಂದು ಅಥವಾ ಎರಡು ವಾರಗಳಲ್ಲಿ ಹಿಜಾಬ್ ಕುರಿತಂತೆ ಫಲಿತಾಂಶ ಹೊರಬೀಳಲಿದೆ’ ಎಂದೂ ಅವರು ಹೇಳಿದ್ದಾರೆ.
ಷರಿಯಾ ಆಧಾರಿತ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕುರ್ದಿಶ್ ಮೂಲದ ಯುವತಿ ಮಹ್ಸಾ ಅಮಿನಿ ಅವರು ಸೆ. 16ರಂದು ಸಾವಿಗೀಡಾಗಿದ್ದರು. ಅವರ ಸಾವಿನ ಬಳಿಕ ಹಿಜಾಬ್ ವಿರೋಧಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಭಟನಕಾರರು ತಾವು ಧರಿಸಿದ್ದ ಹಿಜಾಬ್ ಅನ್ನು ಸುಟ್ಟುಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.