ADVERTISEMENT

ಬಿಹಾರದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕೌನ್ಸಿಲರ್;ಅದನ್ನು ತಡೆದ ಮಹಿಳೆಯ ಕೇಶಮುಂಡನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 11:13 IST
Last Updated 28 ಜೂನ್ 2019, 11:13 IST
   

ಪಟನಾ: ಸ್ಥಳೀಯ ವಾರ್ಡ್ ಕೌನ್ಸಿಲರ್ ಮೊಹಮ್ಮದ್ ಖುರ್ಷಿದ್ ಎಂಬಾತ 19ರ ಹರೆಯದ ಯುವತಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ ಅದನ್ನು ತಡೆದ ಮಹಿಳೆಯ ತಲೆ ಬೋಳಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ವೈಶಾಲಿಯ ಬಿಹಾರಿ ಗ್ರಾಮದಲ್ಲಿ ನವವಧು 19 ಹರೆಯದ ಯುವತಿಯ ಮನೆಗೆ ನುಗ್ಗಿದ ಕೌನ್ಸಿಲರ್ ಖುರ್ಷಿದ್ ಮತ್ತು ಆತನ ಗೆಳೆಯರು ಆಕೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಆಗ ಯುವತಿಯ ಅಮ್ಮ 48ರ ಹರೆಯದ ಮಹಿಳೆ ಇದನ್ನು ತಡೆದಿದ್ದಾರೆ. ಆಮೇಲೆದುಷ್ಕರ್ಮಿಗಳು ಅಮ್ಮ ಮತ್ತು ಮಗಳ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ದಬ್ಬಿ ಪಂಚಾಯತಿ ಕರೆದಿದ್ದಾರೆ. ಇದಾದ ನಂತರಖುರ್ಷಿದ್ ಕ್ಷೌರಿಕನನ್ನು ಕರೆಸಿ ಮಹಿಳೆಯರ ತಲೆ ಬೋಳಿಸುವಂತೆ ಆದೇಶಿಸಿ,ಈ ಮಹಿಳೆಯರನ್ನು ಬೀದಿಯಲ್ಲಿ ಮೆರವಣಿಗೆ ನಡೆಸಿ ಹಿಂಸೆ ನೀಡಿದ್ದಾರೆ.

ಬುಧವಾರ ಸಂಜೆ 6.30ಕ್ಕೆ ಐದಾರು ಮಂದಿ ನಮ್ಮ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.ಆಗ ನನ್ನ ಅಮ್ಮ ನನ್ನನ್ನು ರಕ್ಷಿಸಲು ಮುಂದಾದಾಗ ಆ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ADVERTISEMENT

ಮಹಿಳೆಯರನ್ನು ತಲೆ ಬೋಳಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿದ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ವಾರ್ಡ್ ಕೌನ್ಸಿಲರ್, ಕ್ಷೌರಿಕ ಮತ್ತು ಮೂವರು ವ್ಯಕ್ತಿಗಳನ್ನು ಗುರುವಾರ ಬಂಧಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಭಗ್‌ವಾನ್‌ಪುರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸಂಜಯ್ ಕುಮಾರ್, ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಅಮ್ಮ ಮಗಳು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರು ಎಂದು ಖುರ್ಷಿದ್ ಆರೋಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಘಟನೆ ಸಂಬಂಧ 7 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.