ADVERTISEMENT

ದೆಹಲಿ: ಪ್ರತಿಭಟನೆ ವೇಳೆ ಮರ, ಟವರ್‌ ಏರಿದ ತಮಿಳುನಾಡಿನ ರೈತರು

ಪಿಟಿಐ
Published 24 ಏಪ್ರಿಲ್ 2024, 9:38 IST
Last Updated 24 ಏಪ್ರಿಲ್ 2024, 9:38 IST
<div class="paragraphs"><p>ಮರ ಏರಿದ ತಮಿಳುನಾಡಿನ ರೈತ ಮಹಿಳೆ</p></div>

ಮರ ಏರಿದ ತಮಿಳುನಾಡಿನ ರೈತ ಮಹಿಳೆ

   

ಪಿಟಿಐ

ನವದೆಹಲಿ: ವಿವಿಧ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರಲ್ಲಿ ಕೆಲವರು ಮರ ಹಾಗೂ ಟವರ್ ಏರಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರತಿಭಟನೆಯಲ್ಲಿ ಸುಮಾರು 100 ರೈತರು ಭಾಗವಹಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದು, ₹5 ಸಾವಿರ ಪಿಂಚಣಿ ಮತ್ತು ವೈಯಕ್ತಿಕ ವಿಮೆ, ನದಿಗಳ ಜೋಡಣೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ.

ಮಹಿಳೆ ಸೇರಿದಂತೆ ಕೆಲ ರೈತರು ಮರ ಮತ್ತು ಟವರ್ ಏರಿ ಪ್ರತಿಭಟನೆ ನಡೆಸಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳದ ಕ್ರೇನ್ ಬಳಸಿ ರೈತರನ್ನು ಕೆಳಗಿಳಿಸಿದ್ದಾರೆ.

‘ಮಹಿಳೆಯೊಬ್ಬರು ಮರ ಏರಿದ್ದು, ಇಬ್ಬರು ರೈತರು ಟವರ್ ಏರಿದ್ದರು. ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ’ ಎಂದು ನವದೆಹಲಿ ಡಿಸಿಪಿ ದೇವೇಶ್ ಕುಮಾರ್ ಮಹಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.