ADVERTISEMENT

ಬಾಬರಿ ಮಸೀದಿ ಧ್ವಂಸ ಬಗ್ಗೆ ಹೆಮ್ಮೆ ಇದೆ: ಸಾಧ್ವಿ ಪ್ರಜ್ಞಾ

​ಪ್ರಜಾವಾಣಿ ವಾರ್ತೆ
Published 9 ಮೇ 2019, 16:55 IST
Last Updated 9 ಮೇ 2019, 16:55 IST
   

ಭೋಪಾಲ್:1992ರಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ ಎಂದು ಹೇಳಿದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಜಿಲ್ಲಾ ಚುನಾವಣಾ ಅಧಿಕಾರಿ ನೋಟಿಸ್ ನೀಡಿದ್ದಾರೆ.

ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಜ್ಞಾ, ನಾವು ರಾಮ ಮಂದಿರವನ್ನು ನಿರ್ಮಿಸುತ್ತೇವೆ ಮತ್ತು ಭವ್ಯವಾದ ಮಂದಿರವೊಂದನ್ನು ನಿರ್ಮಿಸುತ್ತೇವೆ.ನಾವು ಅಲ್ಲಿ ಆ ಕಟ್ಟಡವನ್ನು ಧ್ವಂಸ ಮಾಡಲು ಹೋಗಿದ್ದೆವು. ಅದನ್ನು ಧ್ವಂಸ ಮಾಡುವುದಕ್ಕಾಗಿ ನಾನು ಅದರ ಮೇಲೆ ಹತ್ತಿದ್ದೆ.ಆ ಬಗ್ಗೆ ನನಗೆ ಹೆಮ್ಮೆ ಇದೆ. ದೇವರು ನಮಗೆ ಶಕ್ತಿ ಕೊಟ್ಟಿದ್ದಾರೆ. ನಾವು ದೇಶದ ಮುಖದಲ್ಲಿದ್ದ ಕಲೆಯೊಂದನ್ನು ಅಳಿಸಿದ್ದೇವೆ ಎಂದಿದ್ದರು.

ಭೋಪಾಲದ ಜಿಲ್ಲಾ ಚುನಾವಣಾ ಅಧಿಕಾರಿ ಸುಧಾಮ್ ಖಾಡೆ ಅವರು ಪ್ರಜ್ಞಾ ಅವರಿಗೆ ನೋಟಿಸ್ ನೀಡಿದ್ದು ಹೇಳಿಕೆ ಬಗ್ಗೆ ಒಂದು ದಿನದೊಳಗೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.