ADVERTISEMENT

ಮಗನ ಬಗ್ಗೆ ಹೆಮ್ಮೆ ಇದೆ: ನಿವೃತ್ತ ಕರ್ನಲ್ ಥಾಪಾ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 14:51 IST
Last Updated 16 ಜುಲೈ 2024, 14:51 IST
<div class="paragraphs"><p>ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್‌ ಬ್ರಿಜೇಶ್‌ ಥಾಪಾ ಅವರಿಗೆ ತಂದೆ ನಿವೃತ್ತ ಕರ್ನಲ್ ಭುವನೇಶ್‌ ಥಾಪಾ ಅವರು&nbsp;ಸಿಲಿಗುರಿಯಲ್ಲಿ ಮಂಗಳವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ&nbsp;</p></div>

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್‌ ಬ್ರಿಜೇಶ್‌ ಥಾಪಾ ಅವರಿಗೆ ತಂದೆ ನಿವೃತ್ತ ಕರ್ನಲ್ ಭುವನೇಶ್‌ ಥಾಪಾ ಅವರು ಸಿಲಿಗುರಿಯಲ್ಲಿ ಮಂಗಳವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ 

   

ಕೋಲ್ಕತ್ತ: ‘ಜಮ್ಮು–ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ನಡೆದ ಹೋರಾಟದಲ್ಲಿ ಹತನಾದ ನನ್ನ ಮಗನ ಬಗ್ಗೆ ಹೆಮ್ಮೆ ಇದೆ’ ಎಂದು ಹುತಾತ್ಮ ಮೇಜರ್ ಬ್ರಿಜೇಶ್‌ ಥಾಪಾ ಅವರ ತಂದೆ, ನಿವೃತ್ತ ಕರ್ನಲ್‌ ಭುವನೇಶ್ ಕೆ.ಥಾಪಾ ಮಂಗಳವಾರ ಹೇಳಿದ್ದಾರೆ.

‘ಬ್ರಿಜೇಶ್‌ ನನ್ನಿಂದ ಸ್ಫೂರ್ತಿಗೊಂಡಿದ್ದ. ತಾನು ಸಹ ಸೇನೆ ಸೇರಬೇಕು ಎನ್ನುವುದು ಚಿಕ್ಕಂದಿನಿಂದಲೂ ಅವನ ಬಯಕೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇದು ಸೇನಾ ಕಾರ್ಯಾಚರಣೆ. ಹೀಗಾಗಿ ಇಂತಹ ಕಾರ್ಯಾಚರಣೆಗಳಲ್ಲಿ ಅಪಾಯ ಇದ್ದೇ ಇರುತ್ತದೆ. ಎಂಥದೇ ಅಪಾಯವಿರಲಿ, ಸೇನೆಯ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ದಾರ್ಜಿಲಿಂಗ್‌ನ ಲೆಬಾಂಗ್‌ನಲ್ಲಿರುವ ಜಿಂಗ್‌ ಟೀ ಎಸ್ಟೇಟ್‌ನಲ್ಲಿರುವ ನಿವೃತ್ತ ಕರ್ನಲ್‌ ಥಾಪಾ, ಪಿಟಿಐಗೆ ತಿಳಿಸಿದರು.

‘ಈ ಅಪಾಯಕಾರಿ ಕಾರ್ಯಾಚರಣೆಯಲ್ಲಿ ನನ್ನ ಮಗ ಉತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿದ್ದಾನೆ’ ಎಂದೂ ಹೇಳಿದರು.

‘ಎಂಜಿನಿಯರಿಂಗ್ ಪದವೀಧರನಾಗಿದ್ದ 27 ವರ್ಷದ ಬ್ರಿಜೇಶ್, ಐದು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ. ಜುಲೈ 14ರಂದು ನಮ್ಮ ಜೊತೆಗೆ ಕೊನೆಯದಾಗಿ ಮಾತನಾಡಿದ್ದ. ಗುಂಡಿನ ಚಕಮಕಿಯಲ್ಲಿ ಬ್ರಿಜೇಶ್‌ ಹತನಾದ ಬಗ್ಗೆ ಸೋಮವಾರ ರಾತ್ರಿ ಅಧಿಕಾರಿಗಳು ನನಗೆ ಮಾಹಿತಿ ನೀಡಿದರು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.