ನವದೆಹಲಿ: ರೈಲ್ವೆ ಹಳಿ ನಿರ್ವಹಣೆ ಮಾಡುವವರಿಗೆ ಎರಡು ಲೀಟರ್ ಸಾಮರ್ಥ್ಯದ ಉಷ್ಣಾಂಶ ನಿಗ್ರಹಿಸುವಂಥ ನೀರಿನ ಬಾಟಲಿಗಳನ್ನು ನೀಡುವಂತೆ ರೈಲ್ವೆ ಮಂಡಳಿಯು ತನ್ನ ಎಲ್ಲಾ ವಲಯಗಳಿಗೂ ಸೂಚನೆ ನೀಡಿದೆ.
‘ದೇಶದಾದ್ಯಂತ ತೀವ್ರ ಉಷ್ಣಾಂಶ ಮುಂದುವರಿದ ಕಾರಣ ಅಗತ್ಯವಿರುವ ಸಿಬ್ಬಂದಿ ವರ್ಗಕ್ಕೆ ನೀರಿನ ಬಾಟಲಿಗಳನ್ನು ನೀಡುವಂತೆ ಸಿವಿಲ್ ಎಂಜಿನಿಯರಿಂಗ್ ನಿರ್ದೇಶನಾಲಯ ಮನವಿ ಮಾಡಿದೆ’ ಎಂದು ತನ್ನ ಎಲ್ಲಾ ವಲಯಗಳಿಗೆ ರೈಲ್ವೆ ಮಂಡಳಿ ಬರೆದಿರುವ ಪತ್ರದಲ್ಲಿ ಹೇಳಿದೆ.
ಅಖಿಲ ಭಾರತ ರೈಲ್ವೆ ಹಳಿ ನಿರ್ವಹಣೆಗಾರರ ಒಕ್ಕೂಟ (ಎಐಆರ್‌ಟಿಯು) ಈ ನಿರ್ಧಾರವನ್ನು ಸ್ವಾಗತಿಸಿದೆ. ರೈಲ್ವೆ ಮಂಡಳಿಯು ಈ ಪತ್ರವನ್ನು ಏಪ್ರಿಲ್ 9ರಂದೇ ಕಳಿಸಿದೆ. ಬಾಟಲಿಗಳನ್ನು ಇನ್ನಷ್ಟೇ ಹಂಚಬೇಕಿದೆ ಎಂದು ಪಶ್ಚಿಮ ವಿಭಾಗೀಯ ರೈಲ್ವೆಯ ಪ್ರಧಾನ ಕಾರ್ಯದರ್ಶಿ ಹೇಳಿದೆ.
2018ಕ್ಕೂ ಮೊದಲು ಉಷ್ಣಾಂಶ ನಿಗ್ರಹ ಬಾಟಲಿಗಳನ್ನು ರೈಲ್ವೆ ತನ್ನ ಸಿಬ್ಬಂದಿಗೆ ಒದಗಿಸುತ್ತಿತ್ತು. ಬಳಿಕ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಆರು ವರ್ಷಗಳ ಬಳಿಕ ಮತ್ತೆ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.