ನವದೆಹಲಿ: ರಸ್ತೆ ನಿರ್ಮಾಣ ಕಾಮಗಾರಿಗಳ ನೋಂದಾಯಿತ ಮಹಿಳಾ ಕಾರ್ಮಿಕರಿಗೆ, 26 ವಾರ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು ಎಂದು ಕೇಂದ್ರ ಸರ್ಕಾರವು ಉದ್ಯೋಗದಾತರಿಗೆ ಸೂಚಿಸಿದೆ.
‘ಎರಡು ಹೆರಿಗೆಗಳಿಗೆ ಈ ಸೌಲಭ್ಯ ನೀಡಬೇಕು. ಎರಡು ಹೆರಿಗೆ ಮೀರಿದ ಅಥವಾ ದತ್ತು ಪ್ರಕರಣದಲ್ಲಿ 12 ವಾರ ಈ ಸೌಲಭ್ಯ ನೀಡಬೇಕು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
‘ಕಾರ್ಯಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ’ ಕುರಿತ ಸಲಹಾ ವರದಿ ಬಿಡುಗಡೆ ಮಾಡಿದ ಸಚಿವೆ ಈ ಮಾತು ಹೇಳಿದರು. ಕಾರ್ಮಿಕ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು ಈ ವರದಿ ರೂಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.