ನವದೆಹಲಿ: ಕೋವಿಡ್ ಪೀಡಿತರಾಗಿರುವ ಬಂಧಿತ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಶೀಘ್ರ ಸೂಕ್ತ ಮತ್ತು ಗೌರವಯುತವಾದ ಚಿಕಿತ್ಸೆ ಒದಗಿಸಬೇಕು ಎಂದು ಎಡಿಟರ್ಸ್ ಗಿಲ್ಡ್ ಆಗ್ರಹಿಸಿದೆ.
ಸಿದ್ದೀಕ್ ಅವರಿಗೆ ಅಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ವರದಿ ಕೇಳಿ ಕಳವಳ ಉಂಟಾಗಿದೆ ಎಂದುಎಡಿಟರ್ಸ್ ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.
ಅವರ ಬಂಧನ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದಿರುವುದು ಕಳವಳಕಾರಿ ಎಂದೂ ಹೇಳಿದೆ.
ಮಥುರಾದ ಆಸ್ಪತ್ರೆಯಲ್ಲಿ ಸಿದ್ದೀಕ್ ಅವರಿಗೆ ಸರಪಳಿ ಬಿಗಿದು ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಆಹಾರ ತೆಗೆದುಕೊಳ್ಳಲು ಹಾಗೂ ಶೌಚಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅವರ ಪತ್ನಿ ದೂರಿದ್ದರು.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿಹತ್ಯೆ ಮಾಡಿದ್ದ ಪ್ರಕರಣದ ವರದಿಗೆ ತೆರಳಿದ್ದ ಸಿದ್ದೀಕ್ ಅವರನ್ನು ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.