ಪಟ್ನಾ:ಕೋವಿಡ್ ಲಸಿಕೆಯನ್ನುಉಚಿತವಾಗಿ ವಿತರಿಸುವುದು'ರಾಜ್ಯಗಳು ನಿರ್ಧರಿಸಬೇಕಾದವಿಷಯ' ಎಂದು ಹೇಳಿರುವ ಬಿಜೆಪಿ ನಾಯಕ ಮನೋಜ್ ತಿವಾರಿ ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯನ್ನು ದೂಷಿಸುವ ಬದಲು, ಉದ್ಧವ್ ಜಿ ಮಹಾರಾಷ್ಟ್ರದಲ್ಲಿಉಚಿತ ಕೋವಿಡ್-19 ಲಸಿಕೆ ನೀಡುವುದಾಗಿ ಏಕೆ ಖಾತ್ರಿಪಡಿಸುವುದಿಲ್ಲ. ಇದು ಕೇವಲ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬಿಹಾರದಲ್ಲಿ ಚುನಾವಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಅಧಿಕಾರಕ್ಕೆ ಬಂದರೆ ಉಚಿತ ಲಸಿಕೆ ನೀಡುತ್ತದೆ. ವಾಸ್ತವವಾಗಿ, ಉದ್ಧವ್ ಜಿ ಅವರು ಬಯಸಿದರೆ ಲಸಿಕೆಯ ಒಟ್ಟಾರೆ ವೆಚ್ಚವನ್ನುಅವರೇ (ರಾಜ್ಯ ಸರ್ಕಾರವೇ) ಭರಿಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಶಿವಸೇನೆಯ ವಾರ್ಷಿಕ ದಸರಾ ಸಮಾರಂಭದಲ್ಲಿ ಮಾತನಾಡುವಾಗ ಠಾಕ್ರೆ ಹಲವಾರು ವಿಷಯಗಳ ಕುರಿತು ಬಿಜೆಪಿಯ ಮೇಲೆ ದಾಳಿ ನಡೆಸಿದ್ದರು.
'ನೀವು ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆಗಳನ್ನು ನೀಡುವ ಬಗ್ಗೆ ಮಾತನಾಡುತ್ತಿದ್ದೀರಿ. ಹಾಗಾದರೆ ದೇಶದ ಉಳಿದ ಭಾಗಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇ? ಹಾಗೆ ಮಾತನಾಡುವವರು ತಮ್ಮ ಬಗ್ಗೆ ನಾಚಿಕೆಪಡಬೇಕು' ಎಂದು ಠಾಕ್ರೆ ಕಿಡಿಕಾರಿದ್ದರು.
ಬಿಹಾರ ವಿಧಾನಸಭೆ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ನಡೆಯಲಿದೆ. ಮತಎಣಿಕೆಯು ನವೆಂಬರ್ 10ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.