ಶ್ರೀಹರಿಕೋಟಾ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣಾ ನೆಲೆಯಿಂದ ಇಸ್ರೊದ ಪಿಎಸ್‌ಎಲ್‌ವಿ ಸಿ–53 ರಾಕೆಟ್ ಮೂಲಕ ಸಿಂಗಪುರದ ಮೂರು ವಾಣಿಜ್ಯ ಬಳಕೆಯ ಉಪಗ್ರಹಗಳನ್ನು ಗುರುವಾರ ಸಂಜೆ 6.02 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದುಪಿಎಸ್‌ಎಲ್‌ವಿ ರಾಕೆಟ್‌ನ 55ನೇ ಯೋಜನೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ಗೂ (ಎನ್‌ಎಸ್‌ಐಎಲ್) ಇದು ಎರಡನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
ಪಿಎಸ್‌ಎಲ್‌ವಿ ಸಿ–53 ರಾಕೆಟ್‌ಡಿಎಸ್–ಇಒ ಉಪಗ್ರಹದ ಜತೆಗೆ ಇನ್ನೆರಡು ಉಪಗ್ರಹಗಳನ್ನು ಹೊತ್ತು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ನೆಲೆಯಿಂದ ಕಕ್ಷೆಗೆ ಹಾರಿತು ಎಂದು ಇಸ್ರೊ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.