ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ತಮ್ಮ ನಿವಾಸದಲ್ಲಿ ಆಶ್ರಯ ನೀಡಿದ ಆರೋಪದಡಿ ಬಂಧಿತರಾಗಿರುವ ಡಿವೈಎಸ್‌ಪಿ ದೇವೇಂದ್ರ ಸಿಂಗ್ ವಿಚಾರವಾಗಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬಣ್ಣ, ನಂಬಿಕೆ ಮತ್ತು ಧರ್ಮವನ್ನು ಲೆಕ್ಕಿಸದೇ ನಮ್ಮ ದೇಶದ ಶತ್ರುಗಳನ್ನು ಖಂಡಿಸಬೇಕು ಎಂದು ಹೇಳಿರುವ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ಚೌಧರಿ, ‘ಆರೋಪಿ ದೇವೇಂದ್ರ ಸಿಂಗ್ ಬದಲು ದೇವೇಂದ್ರ ಖಾನ್ ಆಗಿದ್ದರೆ, ಆರ್‌ಎಸ್‌ಎಸ್ ಟ್ರೋಲ್ ತಂಡವು ಕರ್ಕಶವಾದ ಗದ್ದಲವೆಬ್ಬಿಸುತ್ತಿತ್ತು. ದೇಶದ ಶತ್ರುಗಳನ್ನು ಅವರ ವರ್ಣ, ನಂಬಿಕೆ ಮತ್ತು ಧರ್ಮಗಳನ್ನು ಲೆಕ್ಕಿಸದೇ ನಾವು ಖಂಡಿಸಬೇಕು’ ಎಂದು ಹೇಳಿದ್ದಾರೆ.
ಪುಲ್ವಾಮಾ ಘಟನೆಯ ಬಗ್ಗೆ ಮಾತನಾಡಿರುವ ಅವರು, ‘ಪುಲ್ವಾಮಾ ಘಟನೆಯ ಹಿಂದಿನ ನಿಜವಾದ ಅಪರಾಧಿ ಯಾರು ಎಂಬ ಬಗ್ಗೆ ಈಗ ಪ್ರಶ್ನೆ ಎದ್ದುನಿಂತಿದೆ. ಅದರ ಬಗ್ಗೆ ಹೊಸದಾಗಿ ತನಿಖೆ ಆಗಬೇಕು’ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.