ADVERTISEMENT

2019 ಹಿನ್ನೋಟ | ರಾಜ್ಯದಲ್ಲಿ ಅನಾಹುತ– ಅಪರಾಧ ಕಹಿ ನೋಟ

ಏಜೆನ್ಸೀಸ್
Published 27 ಡಿಸೆಂಬರ್ 2019, 2:48 IST
Last Updated 27 ಡಿಸೆಂಬರ್ 2019, 2:48 IST
ಕರ್ನಾಟಕವನ್ನು ಕಾಡಿದ ಪ್ರವಾಹ (ಸಂಗ್ರಹ ಚಿತ್ರ)
ಕರ್ನಾಟಕವನ್ನು ಕಾಡಿದ ಪ್ರವಾಹ (ಸಂಗ್ರಹ ಚಿತ್ರ)   

ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ದುರ್ಘಟನೆಗಳ ಇಣುಕುನೋಟ ಇಲ್ಲಿದೆ.

* ಫೆ. 15: ಪುಲ್ವಾಮಾ ದಾಳಿಗೆ ಬಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುಡಗೇರಿ ಗ್ರಾಮದ ಯೋಧ ಎಚ್‌. ಗುರು ಹುತಾತ್ಮ

* ಫೆ. 23:ಬಂಡೀಪುರದಲ್ಲಿ ಕಾಡ್ಗಿಚ್ಚು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು. 11,500 ಎಕರೆ ಕಾಡು ಭಸ್ಮ. ಸೇನಾ ನೆರವಿನಿಂದ ಬೆಂಕಿ ಶಮನ

ADVERTISEMENT

* ಮಾರ್ಚ್‌ 19: ಕುಸಿದ ಬಹುಮಹಡಿ ಕಟ್ಟಡ: ಧಾರವಾಡದ ಕುಮಾರೇಶ್ವರ ನಗರದಲ್ಲಿರುವ ಬಹುಮಹಡಿ ಕಟ್ಟಡ ಕುಸಿದು 19 ಸಾವು. 60ಕ್ಕೂ ಹೆಚ್ಚು ಮಂದಿಗೆ ಗಾಯ

* ಜೂನ್ 11:ಐಎಂಎ ವಂಚನೆ ಬಯಲು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣ ಬಯಲು. ಶಿವಾಜಿ ನಗರದಲ್ಲಿರುವ ಐಎಂಎ ಕಚೇರಿ ಎದುರು ಸಾವಿರಾರು ಜನರಿಂದ ಪ್ರತಿಭಟನೆ– ಕಣ್ಣೀರು

* ಜೂನ್ 18: ಸೆಂಟ್ರಿಂಗ್ ಕುಸಿದು ಅನಾಹುತ: ಬೆಂಗಳೂರಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ (ಎಸ್‌ಟಿಪಿ) ಸೆಂಟ್ರಿಂಗ್ ಕುಸಿದು ಮೂವರು ದುರ್ಮರಣ

* ಜೂನ್ 25: ಉಗ್ರನ ಬಂಧನ: ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಬಂಧನ.

* ಜುಲೈ 29: ಸಿದ್ಧಾರ್ಥ ದುರಂತ ಸಾವು: ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ನಿಗೂಢ ಕಣ್ಮರೆ. ಮಂಗಳೂರು ನೇತ್ರಾವತಿ ನದಿಯಲ್ಲಿ ಶವ ಪತ್ತೆ

*ಮಳೆ–ಅಪಾರ ಹಾನಿ: ಆಗಸ್ಟ್‌ 3ರಿಂದ 11ವರೆಗೆ, ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ತಲಾ ಒಂದು ವಾರ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ, ಬೆಳೆಹಾನಿ, ಆಸ್ತಿ ನಷ್ಟ. ಒಟ್ಟು 137 ಜನರ ಸಾವು, ಸುಮಾರು 10.80 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ, 1.03 ಲಕ್ಷ ಮನೆಗಳಿಗೆ ಹಾನಿ.

* ಆಗಸ್ಟ್ 16:ಕುಟುಂಬದವರಿಗೆ ಗುಂಡಿಕ್ಕಿದ ಉದ್ಯಮಿ: ಮೈಸೂರಿನ ಉದ್ಯಮಿ ಓಂಪ್ರಕಾಶ್‌ ಭಟ್ಟಾಚಾರ್ಯ ಕುಟುಂಬದ ಒಟ್ಟು ಐವರು ಸದಸ್ಯರು ಗುಂಡ್ಲುಪೇಟೆ ಪಟ್ಟಣದ ಖಾಸಗಿ ಜಮೀನಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ

* ಅ. 31: ಹುಬ್ಬಳ್ಳಿಯಲ್ಲಿ ಬಾಂಬ್‌: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ. ಒಬ್ಬನಿಗೆ ಗಾಯ

* ನ. 17: ತನ್ವಿರ್‌ ಸೇಠ್‌ ಕೊಲೆಗೆ ಯತ್ನ: ಮೈಸೂರಿನಲ್ಲಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶಾಸಕ ತನ್ವೀರ್‌ಸೇಠ್‌ ಮೇಲೆ ಫರ್ಹಾನ್ ಪಾಷಾ ಎಂಬಾತ ಕತ್ತಿಯಿಂದ ದಾಳಿ, ಕೊಲೆಗೆ ಯತ್ನ

* ಡಿ. 19: ಗೋಲಿಬಾರ್‌ಗೆ ಇಬ್ಬರ ಬಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ. ಪೊಲೀಸ್‌ ಗೋಲಿಬಾರ್‌ಗೆ ಇಬ್ಬರು ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.