ADVERTISEMENT

ಯೂಟ್ಯೂಬ್‌ನಿಂದ ಪಾಕ್ ಗಾಯಕರ ಹಾಡು ತೆರವುಗೊಳಿಸಿದ ಟಿ–ಸಿರೀಸ್‌

ಪುಲ್ವಾಮಾ ದಾಳಿ: ಎಂಎನ್‌ಎಸ್ ಆಗ್ರಹಕ್ಕೆ ಮಣಿದ ಟಿ–ಸಿರೀಸ್‌

ಏಜೆನ್ಸೀಸ್
Published 17 ಫೆಬ್ರುವರಿ 2019, 7:49 IST
Last Updated 17 ಫೆಬ್ರುವರಿ 2019, 7:49 IST
ಕೃಪೆ: ಟಿ–ಸಿರೀಸ್‌ ಯೂಟ್ಯೂಬ್‌ ಚಾನೆಲ್‌
ಕೃಪೆ: ಟಿ–ಸಿರೀಸ್‌ ಯೂಟ್ಯೂಬ್‌ ಚಾನೆಲ್‌   

ಮುಂಬೈ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ತನ್ನ ಯೂಟ್ಯೂಬ್‌ ಚಾನೆಲ್‌ನಿಂದ ಪಾಕಿಸ್ತಾನಿ ಗಾಯಕರ ಹಾಡುಗಳನ್ನು ಟಿ–ಸಿರೀಸ್‌ ತೆರವುಗೊಳಿಸಿದೆ. ಪಾಕಿಸ್ತಾನಿ ಗಾಯಕರ ಹಾಡುಗಳನ್ನು ತೆರವುಗೊಳಿಸುವಂತೆ ಮತ್ತು ಅವರ ಜತೆ ಕೆಲಸ ಮಾಡದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಶನಿವಾರ ಮ್ಯೂಸಿಕ್‌ ಕಂಪೆನಿಗಳಿಗೆ ಆಗ್ರಹಿಸಿತ್ತು.

ಪಾಕಿಸ್ತಾನದ ಗಾಯಕರಾದ ಫತೇಹ್ ಅಲಿ ಖಾನ್ ಮತ್ತು ಅತಿಫ್ ಅಸ್ಲಾಂ ಅವರ ಆಲ್ಪಂಗಳನ್ನು ಹೊರತರಲು ಟಿ– ಸಿರೀಸ್‌ಈಚೆಗಷ್ಟೇ ಒಪ್ಪಂದ ಮಾಡಿಕೊಂಡಿತ್ತು.

‘ಪಾಕಿಸ್ತಾನಿ ಗಾಯಕರ ಜತೆ ಕೆಲಸ ಮಾಡದಂತೆ ಟಿ–ಸಿರೀಸ್‌, ಸೋನಿ ಮ್ಯೂಸಿಕ್, ವೀನಸ್, ಟಿಪ್ಸ್‌ ಮ್ಯೂಸಿಕ್ ಮತ್ತಿತರ ಭಾರತೀಯ ಮ್ಯೂಸಿಕ್‌ ಕಂಪೆನಿಗಳಿಗೆ ಸೂಚಿಸಿದ್ದೇವೆ. ಈ ಕಂಪೆನಿಗಳು ತಕ್ಷಣವೇ ಅವರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಂಎನ್‌ಎಸ್‌ನ ಚಲನಚಿತ್ರ ವಿಭಾಗದ ಮುಖ್ಯಸ್ಥ ಅಮೇಯ್ ಖೋಪ್ಕರ್ ತಿಳಿಸಿದ್ದಾರೆ.

ADVERTISEMENT

2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಎಲ್ಲ ಪಾಕಿಸ್ತಾನಿ ಕಲಾವಿದರು ಭಾರತ ಬಿಟ್ಟು ತೆರಳುವಂತೆ ಸೂಚಿಸಿದ್ದಎಂಎನ್‌ಎಸ್ 48 ಗಂಟೆಗಳ ಗಡುವನ್ನೂ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.