ಪುಣೆ: ಪುಣೆ ಬಾರ್‌ವೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದಡಿ ಮುಂಬೈನ ಇಬ್ಬರು ವ್ಯಕ್ತಿಗಳನ್ನು ಪುಣೆ ಪೊಲೀಸರು ಬಂಧಿಸಿರುವುದಾಗಿ ಮಂಗಳವಾರ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರು ಪುಣೆ ನಗರದ ಫರ್ಗ್ಯುಸನ್ ಕಾಲೇಜ್ ರಸ್ತೆಯಲ್ಲಿರುವ ಲಿಕ್ವಿಡ್ ಲೀಸರ್ ಲೌಂಜ್ ಅಥವಾ ಎಲ್3 ಬಾರ್‌ನಲ್ಲಿ ಕೆಲ ದಿನಗಳ ಹಿಂದೆ ಡ್ರಗ್ಸ್ ತರಹದ ವಸ್ತುಗಳೊಂದಿಗೆ ಕಾಣಿಸಿಕೊಂಡ ವಿಡಿಯೊ ವೈರಲ್ ಆಗಿತ್ತು.
‘ವೈರಲ್ ವಿಡಿಯೋದಲ್ಲಿ ಡ್ರಗ್ಸ್ ತರಹದ ವಸ್ತುಗಳೊಂದಿಗೆ ಕಾಣಿಸಿಕೊಂಡ ಇಬ್ಬರನ್ನು ನಾವು ಮುಂಬೈನಲ್ಲಿ ಬಂಧಿಸಿದ್ದೇವೆ’ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಪೊಲೀಸರು, ಕಾರ್ಯಕ್ರಮ ಆಯೋಜಕರು ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ ಮತ್ತು ಎಲ್ 3 ಬಾರ್ ಅನುಮತಿಸಲಾದ ಸಮಯ ಮೀರಿ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಭಾನುವಾರ ಬೆಳಗಿನ ಜಾವ 5 ಗಂಟೆಯವರೆಗೆ ಬಾರ್ ಕಾರ್ಯನಿರ್ವಹಿಸುತ್ತಿದ್ದು, ನಿಗದಿತ ಸಮಯ ಮೀರಿ ಮದ್ಯ ಮಾರಾಟ ಮಾಡಲಾಗುತ್ತಿದ್ದ ಆರೋಪದಡಿ ಅಬಕಾರಿ ಇಲಾಖೆ ಎಲ್3 ನ ಆರು ವೇಟರ್‌ಗಳನ್ನು ಬಂಧಿಸಿದೆ. ಪುಣೆಯಲ್ಲಿ ಬಾರ್‌ಗಳು ಮತ್ತು ಪಬ್‌ಗಳು 1.30ರವರೆಗೆ ಮಾತ್ರ ತೆರೆದಿರಲು ಅನುಮತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.