ಪುಣೆ: ವಿಲಾಸಿ ಪೋಶೆ ಕಾರು ಅಪಘಾತದ ಸಂಬಂಧ, ಕುಟುಂಬದ ವಾಹನ ಚಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಮೇ 31ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಿ ಸ್ಥಳೀಯ ಕೋರ್ಟ್ ಮಂಗಳವಾರ ಆದೇಶಿಸಿತು.
ಇದೇ ಪ್ರಕರಣದಲ್ಲಿ ಬಾಲಕನ ತಾತನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿತು. ಇಬ್ಬರನ್ನು ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಪೋಶೆ ಕಾರು ಅಪಘಾತದ ಪ್ರಕರಣದಲ್ಲಿ, ನಾನೇ ಕಾರು ಚಲಾಯಿಸುತ್ತಿದ್ದುದಾಗಿ ತಪ್ಪೊಪ್ಪಿಗೆ ನೀಡುವಂತೆ ಬಾಲಕನ ತಂದೆ ವಿಶಾಲ್ ಅಗರವಾಲ್, ತಾತ ಸುರೇಂದ್ರ ಅಗರವಾಲ್ (77) ಕುಟುಂಬದ ವಾಹನದ ಚಾಲಕನಿಗೆ ಒತ್ತಡ ಹೇರಿದ್ದರು. ತಪ್ಪೊಪ್ಪಿಗೆ ನೀಡಲು ಹಣದ ಆಮಿಷ ಒಡ್ಡುವ ಜೊತೆಗೆ, ಬೆದರಿಕೆಯನ್ನು ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.