ADVERTISEMENT

Pune Car Crash: 17ರ ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ

ಪಿಟಿಐ
Published 22 ಮೇ 2024, 4:37 IST
Last Updated 22 ಮೇ 2024, 4:37 IST
<div class="paragraphs"><p>ಪೋಶೆ ಕಾರು ಅಪಘಾತ</p></div>

ಪೋಶೆ ಕಾರು ಅಪಘಾತ

   

(ಪಿಟಿಐ ಚಿತ್ರ)

ಪುಣೆ: 17 ವರ್ಷದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ವಿಲಾಸಿ ಕಾರು 'ಪೋಶೆ' ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ, ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ ಜಡಿಯಲಾಗಿದೆ.

ADVERTISEMENT

ಪುಣೆ ಜಲ್ಲಾಧಿಕಾರಿಯ ಆದೇಶದ ಮೇರೆಗೆ ಮಹಾರಾಷ್ಟ್ರದ ಅಬಕಾರಿ ಇಲಾಖೆಯು ಕ್ರಮ ಕೈಗೊಂಡಿದೆ. ಕೋಸಿ ರೆಸ್ಟೋರೆಂಟ್ ಮತ್ತು ಹೋಟೆಲ್ ಬ್ಲಾಕ್ ಕ್ಲಬ್‌ಗೆ ಬೀಗ ಜಡಿಯಲಾಗಿದೆ.

ಬಾಲಕ ತಮ್ಮ ಗೆಳೆಯರೊಂದಿಗೆ ಶನಿವಾರ ರಾತ್ರಿ 9.30ರಿಂದ ಮಧ್ಯರಾತ್ರಿ 1ರ ನಡುವೆ ರೆಸ್ಟೋರೆಂಟ್‌ಗೆ ತೆರಳಿ ಮದ್ಯಪಾನ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ತಾಪ್ತರಿಗೆ ಮದ್ಯ ಪೂರೈಸುವುದನ್ನು ತಡೆಯಲು ಅಬಕಾರಿ ಇಲಾಖೆಯು ವಿಶೇಷ ತಪಾಸಣಾ ಅಭಿಯಾನವನ್ನು ಪ್ರಾರಂಭಿಸಿದೆ. ನಿಯಮ ಉಲ್ಲಂಘನೆಯಾದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಿದ್ದು, ಪರವಾನಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಪುಣೆ ನಗರದ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಪಾನಮತ್ತ 17ರ ಹರೆಯದ ಬಾಲಕ ಪೋಶೆ ಕಾರು ಚಲಾಯಿಸುತ್ತಿದ್ದಾಗ ಅದು ಬೈಕಿಗೆ ಡಿಕ್ಕಿ ಹೊಡೆದಿತ್ತು. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಸಾಫ್ಟ್‌ವೇರ್‌ ತಂತ್ರಜ್ಞರಾದ 24 ವರ್ಷ ವಯಸ್ಸಿನ ಅನಿಸ್ ಅವಾಧಿಯ, ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.