ADVERTISEMENT

ಗರ್ಭಿಣಿಯಾಗಲು ಮಾನವನ ಮೂಳೆ ತಿನ್ನುವಂತೆ ಒತ್ತಡ: ಗಂಡ, ಅತ್ತೆ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2023, 8:37 IST
Last Updated 21 ಜನವರಿ 2023, 8:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಹಾರಾಷ್ಟ್ರ: ಗರ್ಭಿಣಿಯಾಗಲು ಮಹಿಳೆಯೊಬ್ಬರಿಗೆ ಪುಡಿಮಾಡಿದ ಮಾನವನ ಮೂಳೆಗಳನ್ನು ತಿನ್ನುವಂತೆ ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸಂತ್ರಸ್ತೆ ನೀಡಿದ ಎರಡು ಪ್ರತ್ಯೇಕ ದೂರಿನನ್ವಯ ಪುಣೆ ಪೊಲೀಸರು ಆಕೆಯ ಪತಿ, ಅತ್ತೆ –ಮಾವ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

7 ಮಂದಿ ಆರೋಪಿಗಳ ವಿರುದ್ಧ ಮೂಢನಂಬಿಕೆ ವಿರೋಧಿ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 498 ಎ, 323, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ನಗರದ ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ಮಾಹಿತಿ ನೀಡಿದ್ದಾರೆ.

ADVERTISEMENT

ಪತಿಯ ಕುಟುಂಬದವರು ಮದುವೆಯಾದ ಆರಂಭದ ದಿನಗಳಲ್ಲಿ ತವರು ಮನೆಯಿಂದ ನಗದು, ಚಿನ್ನದ ಆಭರಣಗಳನ್ನು ತರುವಂತೆ ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.

‘ಮೂಢನಂಬಿಕೆಗಳಿಂದ ಪ್ರಭಾವಿತರಾಗಿದ್ದ ಪತಿ ಹಾಗೂ ಅತ್ತೆ ಮಾಟಗಾರರ ಸಲಹೆ ಕೇಳುತ್ತಿದ್ದರು. ಅಲ್ಲದೆ ಅಮಾವಾಸ್ಯೆ ಬಂತೆದರೆ ಅನೇಕ ಮೂಢನಂಬಿಕೆಯ ಆಚರಣೆಗಳನ್ನು ಮಾಡಲು ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ರಾತ್ರಿ ವೇಳೆ ಸ್ಮಶಾನಕ್ಕೆ ಕಳುಹಿಸುವುದು ಜೊತೆಗೆ ಸತ್ತ ಮಾನವರ ಮೂಳೆಗಳನ್ನು ತಿನ್ನಲು ಬಲವಂತ ಮಾಡುತ್ತಿದ್ದರು ಎಂಬ ಸಂತ್ರಸ್ತೆ ಮತ್ತೊಂದು ದೂರು ದಾಖಲಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.