ADVERTISEMENT

TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

ಪಿಟಿಐ
Published 12 ಆಗಸ್ಟ್ 2024, 10:40 IST
Last Updated 12 ಆಗಸ್ಟ್ 2024, 10:40 IST
<div class="paragraphs"><p>TTDಯ&nbsp;SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ</p></div>

TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

   

ತಿರುಪತಿ: ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಮೂಲದ ಉದ್ಯಮಿಯೊಬ್ಬರು ₹21 ಕೋಟಿ ಹಣವನ್ನು ದೇಣಿಗೆ ಮಾಡಿದ್ದಾರೆ.

ಗಂಭೀರ ಸ್ವರೂಪದ ಕಾಯಿಲೆಯುಳ್ಳ ಬಡ ರೋಗಗಿಗಳಿಗೆ ಎಸ್‌.ವಿ ಪ್ರಾಣದಾನ ಟ್ರಸ್ಟ್‌ ಯೋಜನೆ ಅಡಿಯಲ್ಲಿ, ಟಿಟಿಡಿ ಮುನ್ನಡೆಸುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ADVERTISEMENT

ಭಾನುವಾರ ರಾತ್ರಿ ಪ್ರಕಟಣೆ ಹೊರಡಿಸಿರುವ ದೇವಾಲಯದ ಆಡಳಿತ ಮಂಡಳಿ, ‘ಪಂಜಾಬ್‌ ಮೂಲದ ರಾಜೀಂದರ್‌ ಗುಪ್ತಾ ಅವರು ₹21 ಕೋಟಿ ಹಣವನ್ನು ಪ್ರಾಣದಾನ ಟ್ರಸ್ಟ್‌ಗೆ ನೀಡಿದ್ದಾರೆ. ಚೆಕ್‌ ಅನ್ನು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್‌.ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದ್ದಾರೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.