ADVERTISEMENT

ಸಬ್ಸಿಡಿ ವಿದ್ಯುತ್‌ ಪೂರೈಕೆ; ಹಿಂಪಡೆದ ಪಂಜಾಬ್‌ ಸರ್ಕಾರ

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿ

ಪಿಟಿಐ
Published 5 ಸೆಪ್ಟೆಂಬರ್ 2024, 14:25 IST
Last Updated 5 ಸೆಪ್ಟೆಂಬರ್ 2024, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಢೀಗಡ: ಗೃಹ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ ₹3ರಂತೆ ಸಬ್ಸಿಡಿಯಲ್ಲಿ ವಿದ್ಯುತ್‌ ಪೂರೈಸುವ ಹಿಂದಿನ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಗುರುವಾರ ಪಂಜಾಬ್‌ನ ಸಚಿವ ಸಂಪುಟವು ಹಿಂದಕ್ಕೆ ಪಡೆದಿದೆ. ಇದರಿಂದ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹1,500 ಕೋಟಿಯಿಂದ ₹1,800 ಕೋಟಿ ಆದಾಯ ಬರಲಿದೆ.

‘ಪ್ರತಿ ಮನೆಗಳಿಗೂ ಮಾಸಿಕ 300 ಯುನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ಪೂರೈಸುವ ಸರ್ಕಾರದ ಯೋಜನೆಯೂ ಮುಂದುವರಿಯಲಿದೆ’ ಎಂದು ಪಂಜಾಬ್‌ನ ಹಣಕಾಸು ಸಚಿವ ಹರ್ಪಾಲ್‌ ಸಿಂಗ್‌ ಛೀಮಾ ತಿಳಿಸಿದ್ದಾರೆ.

2021ರಲ್ಲಿ ಪಂಜಾಬ್‌ನ ಆಗಿನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಗೃಹ ಬಳಕೆಯ ವಿದ್ಯುತ್‌ ಶುಲ್ಕವನ್ನು ಪ್ರತಿ ಯುನಿಟ್‌ಗೆ ₹3ಕ್ಕೆ ಇಳಿಕೆ ಮಾಡಿದ್ದರು. 7 ಕಿಲೋ ವ್ಯಾಟ್‌ವರೆಗೂ ಇದರ ಲಾಭ ಪಡೆಯಲು ಅವಕಾಶವಿತ್ತು. ಹಿಂದಿನ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಸಂಪುಟ ಸಭೆ ಹಿಂದಕ್ಕೆ ಪಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.