ADVERTISEMENT

ಪಂಜಾಬ್‌ | ಮಾದಕ ದ್ರವ್ಯ ಕಳ್ಳಸಾಗಣೆ: ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ಪಿಟಿಐ
Published 21 ಜುಲೈ 2024, 2:47 IST
Last Updated 21 ಜುಲೈ 2024, 2:47 IST
<div class="paragraphs"><p>ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ</p></div>

ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

   

ಎಎನ್‌ಐ ಸ್ಕ್ರೀನ್‌ಗ್ರ್ಯಾಬ್

ಚಂಡೀಗಢ(ಪಂಜಾಬ್): ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆ.ಜಿ ಮೆಥಾಂಫೆಟಮೈನ್, 2.45 ಕೆ.ಜಿ ಹೆರಾಯಿನ್ ಮತ್ತು 520 ಗ್ರಾಂ ಸೂಡೊಫೆಡ್ರಿನ್ ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಮುಖ ಆರೋಪಿ ಗುರ್ಬಾಕ್ಸ್ ಅಲಿಯಾಸ್ ಲಾಲಾ, ಇನ್ನಿಬ್ಬರು ಆರೋಪಿಗಳಾದ ದಲ್ಜಿತ್ ಕೌರ್ ಮತ್ತು ಅರ್ಷದೀಪ್ ಬಂಧಿತರು. ಈ ಮೂವರೂ ಅಮೃತಸರದ ಚೆಹರ್ತಾ ನಿವಾಸಿಗಳಾಗಿದ್ದಾರೆ. ಮಾದಕ ದ್ರವ್ಯ ತಯಾರಿಕೆ ಮತ್ತು ಕಳ್ಳಸಾಗಣೆಯಲ್ಲಿ ಲಾಲಾ ಅತಿದೊಡ್ಡ ಪಾತ್ರವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ದ್ರವ್ಯಗಳ ಪ್ರತಿ ಸಾಗಣೆಗೆ ಲಾಲಾ ಸುಮಾರು ₹50,000 ಸಾವಿರ ಕಮಿಷನ್ ಪಡೆಯುತ್ತಿದ್ದ ಎಂದು ಹೇಳಿದ್ದಾರೆ.

ಲಾಲಾ ಮತ್ತು ಅರ್ಷದೀಪ್ ಅಪರಾಧ ಹಿನ್ನೆಲೆ ಹೊಂದಿದ್ದು, ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.