ADVERTISEMENT

ಪಂಜಾಬ್: ವಿದ್ಯುತ್ ಕದಿಯುತ್ತಿದ್ದ ಗಾರ್ಮೆಂಟ್ ಮಾಲೀಕನಿಗೆ ₹ 27 ಲಕ್ಷ ದಂಡ

ಪಿಟಿಐ
Published 24 ಫೆಬ್ರುವರಿ 2021, 16:53 IST
Last Updated 24 ಫೆಬ್ರುವರಿ 2021, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲೂಧಿಯಾನ: ವಿದ್ಯುತ್ ಕದಿಯುತ್ತಿದ್ದ ಆರೋಪ ಹೊತ್ತಿರುವ ಗಾರ್ಮೆಂಟ್ ಉತ್ಪಾದನಾ ಘಟಕದ ಮಾಲೀಕರಿಗೆ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಪಿಎಸ್‌ಪಿಸಿಎಲ್) ₹ 27 ಲಕ್ಷ ದಂಡ ವಿಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಫೋಕಲ್ ಪಾಯಿಂಟ್‌ನ ಮಹಾವೀರ್ ಜೈನ್ ಕಾಲೋನಿಯಲ್ಲಿ ನಡೆದ ಕಳ್ಳತನವನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಅವರು ಹೇಳಿದರು.

ವಿತರಣಾ ಟ್ರಾನ್ಸ್‌ಫಾರ್ಮರ್‌ನಿಂದ ನೇರವಾಗಿ 20 ಮೀಟರ್ ವಿದ್ಯುತ್ ಕೇಬಲ್ ಮೂಲಕ 45 ಕಿಲೋವ್ಯಾಟ್ ವಿದ್ಯುತ್ತನ್ನು ಗ್ರಾಹಕರು ಸಂಪರ್ಕ ಪಡೆದುಕೊಂಡಿದ್ದರು ಎಂದು ಅವರು ಹೇಳಿದರು.

ADVERTISEMENT

ವಿದ್ಯುತ್ ಕಾಯ್ದೆ 2003ರ ಸಂಬಂಧಿತ ವಿಭಾಗದಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.