ADVERTISEMENT

ಪಾಕ್‌ನ ಗುರುದ್ವಾರಕ್ಕೆ ಪಂಜಾಬಿ ನಟರ ಭೇಟಿ

ಪಿಟಿಐ
Published 11 ಜನವರಿ 2022, 15:52 IST
Last Updated 11 ಜನವರಿ 2022, 15:52 IST
ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹೀಬ್‌ನ ಸಂಗ್ರಹ ಚಿತ್ರ
ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹೀಬ್‌ನ ಸಂಗ್ರಹ ಚಿತ್ರ   

ಲಾಹೋರ್‌ (ಪಿಟಿಐ): ಪಂಜಾಬಿ ಚಲನಚಿತ್ರ ‘ಚಲ್ ಮೇರಾ ಪುಟ್‌ 2’ದ ನಟರು ಸೋಮವಾರ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದರು. ವೀಸಾ ಮುಕ್ತ ಕರ್ತಾರ್‌ಪುರ್‌ ಕಾರಿಡಾರ್‌ ಮೂಲಕ ಅವರು ಗುರುದ್ವಾರಕ್ಕೆ ಭೇಟಿ ನೀಡಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ನಟರಾದ ಹಾರ್ಬಿ ಸಂಘ, ಅನಿತಾ ದೇವಗನ್‌, ಹರ್‌ದೀಪ್‌ ಗಿಲ್‌ ಹಾಗೂ ಅವರ ಕುಟುಂಬ ಸದಸ್ಯರು ಭೇಟಿ ನೀಡಿದ್ದು, ಇವರನ್ನು ಚಿತ್ರದಲ್ಲಿ ಸಹನಟರಾದ ಪಾಕಿಸ್ತಾನದ ಚಲನಚಿತ್ರ ಮತ್ತು ರಂಗಭೂಮಿ ನಟರು ಸ್ವಾಗತಿಸಿದರು ಎಂದು ಕಾರಿಡಾರ್‌ನ ಸಿಇಒ ಮೊಹಮ್ಮದ್‌ ಲತೀಫ್‌ ತಿಳಿಸಿದರು.

ಪಾಕಿಸ್ತಾನದ ನಟರಾದ ಇಫ್ತಿಕಾರ್‌ ಠಾಕೂರ್ ಮತ್ತು ಕೈಸರ್‌ ಪಿಯಾ ಅವರು ಭಾರತದ ನಟರನ್ನು ಅಪ್ಪಿಕೊಂಡು ಬರಮಾಡಿಕೊಂಡಿದ್ದು, ಜೊತೆಯಲ್ಲಿಯೇ ಗುರುದ್ವಾರ, ಸಂಗ್ರಹಾಲಯ, ಕುನ್ವಾನ್‌ ಸಾಹೀಬ್‌, ಮಿಸಿಲ್‌ ಸಾಹಬ್‌ ಮತ್ತು ಇತರೆ ಕೆಲ ಪ್ರದೇಶಗಳಿಗೂ ಭೇಟಿ ನೀಡಿದ್ದರು. ಲಂಗರ್‌ನಲ್ಲಿ ಊಟ ಸ್ವೀಕರಿಸಿದ ನಟರಿಗೆ, ನಂತರ ಗುರುದ್ವಾರದ ಆಡಳಿತವು ವಿಶೇಷ ಕೊಡುಗೆ ನೀಡಿ ಗೌರವಿಸಿತು.

ADVERTISEMENT

ಗುರುದ್ವಾರ ಭೇಟಿ ಕುರಿತು ಸಂತಸ ವ್ಯಕ್ತಪಡಿಸಿದ ನಟ ಹಾರ್ಬಿ ಸಂಘ ಅವರು, ಕಾರಿಡಾರ್‌ ಉಭಯ ದೇಶಗಳಲ್ಲಿ ಅಭ್ಯುದಯಕ್ಕೆ ನೆರವಾಗಲಿದೆ ಎಂದು ಆಶಿಸಿದರು. ಸಿಇಒ ಆತೀಫ್ ಅವರು, ನಿತ್ಯ ಸುಮಾರು 200–250 ಮಂದಿ ಸಿಖ್ಖರು ಈ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.