ಪುರಿ: ಇಲ್ಲಿನ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ಭಕ್ತರಿಗೆ ಸೋಮವಾರದಿಂದ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿದೆ.
ಅಲ್ಲದೇ, ದೇವಾಲಯದ ಆವರಣದಲ್ಲಿ ಪಾನ್, ಗುಟ್ಕಾ ಜಗಿಯುವುದು ಮತ್ತು ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ವಸ್ತುಗಳನ್ನು ಬಳಕೆ ಮಾಡುವುದನ್ನು ಮಂಡಳಿ ಸಂಪೂರ್ಣವಾಗಿ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಅದು ಹೇಳಿದೆ.
‘ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಭ್ಯ ಉಡುಪನ್ನು ಧರಿಸಿರಬೇಕು. ಹಾಫ್‌ಪ್ಯಾಂಟ್, ಶಾರ್ಟ್‌ಗಳು, ಸ್ಕರ್ಟ್ಸ್ ಮತ್ತು ತೋಳಿಲ್ಲದ ಉಡುಪು ಧರಿಸಿದವರನ್ನು ದೇವಸ್ಥಾನದ ಒಳಗೆ ಬಿಡುವುದಿಲ್ಲ. ಹೊಸ ವರ್ಷದ ಅಂಗವಾಗಿ ದೇವರ ದರ್ಶನಕ್ಕಾಗಿ ಸೋಮವಾರ ದೇಗುಲಕ್ಕೆ ಬಂದ ಪುರುಷ ಭಕ್ತರು ಧೋತಿ ಮತ್ತು ಟವೆಲ್ ಅನ್ನು ಧರಿಸಿದ್ದರೆ, ಮಹಿಳಾ ಭಕ್ತರು ಸೀರೆ ಮತ್ತು ಸಲ್ವಾರ್ ಕಮೀಜ್ ಧರಿಸಿದ್ದರು’ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹೊಸ ವರ್ಷದ ಮೊದಲ ದಿನದಂದು ಅಪಾರ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಜಗನ್ನಾಥನ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.