ADVERTISEMENT

ಪುರಿ ಜಗನ್ನಾಥ ರಥಯಾತ್ರೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

ಪಿಟಿಐ
Published 7 ಜುಲೈ 2024, 5:13 IST
Last Updated 7 ಜುಲೈ 2024, 5:13 IST
ಪುರಿ ಜಗನ್ನಾಥ ರಥಯಾತ್ರೆ
ಪುರಿ ಜಗನ್ನಾಥ ರಥಯಾತ್ರೆ   

ಪುರಿ (ಒಡಿಶಾ): 53 ವರ್ಷಗಳ ನಂತರ ಎರಡು ದಿನಗಳ ಕಾಲ ನಡೆಯುವ ಜಗನ್ನಾಥ ವಾರ್ಷಿಕ ರಥಯಾತ್ರೆ ಇಂದಿನಿಂದ (ಭಾನುವಾರ) ನಡೆಯಲಿದೆ.

ಇದಕ್ಕಾಗಿ ಕಡಲ ತಡಿಯಲ್ಲಿರುವ ದೇವನಗರಿ ಪುರಿ ಸಜ್ಜಾಗಿದೆ.

ಲಕ್ಷಾಂತರ ಭಕ್ತರ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾನುವಾರದ ರಥಯಾತ್ರೆಗೆ ಸಾಕ್ಷಿಯಾಗಲಿದ್ದಾರೆ. ಅವರ ಭೇಟಿಗಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ.

ADVERTISEMENT

ಮೂರು ಪ್ರಮುಖ ದೇವರುಗಳಾದ ಜಗನ್ನಾಥ, ದೇವಿ ಸುಭದ್ರಾ ಹಾಗೂ ಬಲ ಭದ್ರನ ರಥಯಾತ್ರೆ ನಡೆಯಲಿದೆ. ಇದಕ್ಕಾಗಿ ಹಲವಾರು ಆಚರಣೆಗಳು ನಡೆಯಲಿವೆ. ಕೊನೆಯ ಬಾರಿಗೆ ಈ ಮಾದರಿಯ ರಥಯಾತ್ರೆ 1971ರಲ್ಲಿ ಎರಡು ದಿನಗಳ ಕಾಲ ನಡೆದಿತ್ತು.

ಇಂದು ಮಧ್ಯಾಹ್ನವೇ ಭಕ್ತರು ಮೂರು ರಥಗಳನ್ನು ಎಳೆಯಲಿದ್ದಾರೆ.

ಮಹಾರಥೋತ್ಸವದಲ್ಲಿ ಭಕ್ತರಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.