ADVERTISEMENT

Google Maps ಎಡವಟ್ಟು! ಅಪೂರ್ಣ ಸೇತುವೆ ಮೇಲೆ ಕಾರು ಚಲಾಯಿಸಿ ಮೂವರು ಸಾವು– FIR

ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಮೂವರು ಮೃತಪಟ್ಟಿರುವ ಪ್ರಕರಣ

ಪಿಟಿಐ
Published 26 ನವೆಂಬರ್ 2024, 5:48 IST
Last Updated 26 ನವೆಂಬರ್ 2024, 5:48 IST
<div class="paragraphs"><p>Google Maps ಎಡವಟ್ಟು! ಅಪೂರ್ಣ ಸೇತುವೆ ಮೇಲೆ ಕಾರು ಚಲಾಯಿಸಿ ಮೂವರು ಸಾವು– FIR</p></div>

Google Maps ಎಡವಟ್ಟು! ಅಪೂರ್ಣ ಸೇತುವೆ ಮೇಲೆ ಕಾರು ಚಲಾಯಿಸಿ ಮೂವರು ಸಾವು– FIR

   

ಬದೌನ್, ಉತ್ತರಪ್ರದೇಶ: ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೂಗಲ್ ಮ್ಯಾಪ್ಸ್ ಇಂಡಿಯಾ ಹಾಗೂ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬದೌನ್ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ರಾಯ್‌ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಬರೇಲಿ ಸಮೀಪ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬಳಸಿದ್ದಾರೆ. ಆದರೆ, ಆ ಸೇತುವೆ ಅಪೂರ್ಣವಾಗಿತ್ತು. ಇದರಿಂದ ನದಿಗೆ ರಬಸವಾಗಿ ಬಿದ್ದ ಕಾರು ಸಂಪೂರ್ಣ ಜಖಂಗೊಂಡಿತ್ತು. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು.

ಮೃತರನ್ನು ಫಾರೂಕಾಬಾದ್‌ನ ಸಹೋದರರಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ.

ಗೂಗಲ್ ಮ್ಯಾಪ್ ಹಾಗೂ ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲ ಕಡೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ ಎಂದು ಬದೌನ್ ಡಿಸಿ ನಿಧಿ ಶ್ರೀವಾಸ್ತವ್ ಹೇಳಿದ್ದಾರೆ.

PWD ನಾಲ್ವರು ಎಂಜಿನಿಯರ್ ಹಾಗೂ ಗೂಗಲ್‌ ಮ್ಯಾಪ್ಸ್ ಪ್ರಾದೇಶಿಕ ಮುಖ್ಯಸ್ಥರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮೃತರ ಬಗ್ಗೆ ಸಂತಾಪಗಳನ್ನು ಸೂಚಿಸಿರುವ ಗೂಗಲ್ ಮ್ಯಾಪ್‌ ವಕ್ತಾರರು, ಪ್ರಕರಣದ ತನಿಖೆಗೆಗೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳ ಜೊತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಮಗಂಗಾ ನದಿ ಸೇತುವೆ ಇತ್ತೀಚಿನ ಮಳೆಗೆ ಅರ್ಧ ಕುಸಿದಿತ್ತು. ಈ ಸೇತುವೆಯನ್ನು ಜನ ಬಳಸುತ್ತಿರಲಿಲ್ಲ. ಅದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲಿ ಮುನ್ನೆಚ್ಚರಿಕೆ ಸೂಚನಾ ಫಲಕಗಳನ್ನು ಪ್ರದರ್ಶಿಸದೇ ಇದ್ದಿದ್ದರಿಂದ ಇದರ ಬಗ್ಗೆ ಅರಿವಿರದವರು ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಗೂಗಲ್ ಮ್ಯಾಪ್‌ ನ್ಯಾವಿಗೇಷನ್‌ ಅಪ್‌ಡೇಟ್‌ ಆಗದೇ ಇರುವುದೂ ಇಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.