ADVERTISEMENT

ಕ್ಯುಎಸ್ ರ‍್ಯಾಂಕಿಂಗ್‌ ಶ್ರೇಣಿಯಲ್ಲಿ ವಿಐಟಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 21:20 IST
Last Updated 5 ಮಾರ್ಚ್ 2021, 21:20 IST

ವೆಲ್ಲೂರು: ಕ್ಯೂಎಸ್ ವರ್ಲ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿರುವ 2021ರ ವಿಷಯವಾರು ರ‍್ಯಾಂಕಿಂಗ್‌ನ ವಿಶ್ವದ 450 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸ್ಥಾನ ಪಡೆದಿದೆ. ವಿಐಟಿಯು ಭಾರತದ 12 ಉತ್ತಮ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಒಂದಾಗಿದೆ.

ಕ್ಯೂಎಸ್ ರ‍್ಯಾಂಕಿಂಗ್ ಈ ವರ್ಷ ಪ್ರಕಟಿಸಿರುವ ಪಟ್ಟಿಯಲ್ಲಿ ವಿಐಟಿಯ ಏಳು ವಿಷಯಗಳು ಸೇರಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪ್ಯೂಟರ್ ಸೈನ್ಸ್ ಅಂಡ್ ಇನ್‌ಫಾರ್ಮೇಷನ್ ಸಿಸ್ಟಮ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ), ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂಡ್ ಕೆಮಿಸ್ಟ್ರಿ ವಿಷಯಗಳು ಈ ಬಾರಿ 50 ಸ್ಥಾನಗಳನ್ನು ಹೆಚ್ಚಿಸಿಕೊಂಡಿವೆ.

ಇವುಗಳಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇನ್‌ಫಾರ್ಮೇಷನ್ ಸಿಸ್ಟಮ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ವಿಷಯಗಳು ಭಾರತದ ಮೊದಲ 10ನೇ ರ‍್ಯಾಂಕಿಂಗ್‌ನ ಶ್ರೇಣಿಯೊಳಗಿವೆ. ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಷಯವು ಮೊದಲ 300 ಶ್ರೇಣಿಯೊಳಗಿದೆ. ಅಂತೆಯೇ ಕಂಪ್ಯೂಟರ್ ಸೈನ್ಸ್ ಅಂಡ್ ಇನ್‌ಫಾರ್ಮೇಷನ್ ಸಿಸ್ಟಮ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಗಳು ವಿಶ್ವದ ಮೊದಲ 400 ರ‍್ಯಾಂಕಿಂಗ್‌ನ ಶ್ರೇಣಿಯೊಳಗೆ ಸ್ಥಾನ ಪಡೆದಿವೆ.

ADVERTISEMENT

ವಿಐಟಿಯ ಮ್ಯಾಥಮೆಟಿಕ್ಸ್ ಮತ್ತು ಬಯಾಲಾಜಿಕಲ್ ಸೈನ್ಸಸ್ ವಿಷಯಗಳು ಕ್ಯೂಸ್ ವಿಷಯವಾರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿದ್ದು, ಅವು ಕ್ರಮವಾಗಿ ವಿಶ್ವದ 500 ಮತ್ತು 600ನೇ ರ‍್ಯಾಂಕಿಂಗ್‌ ಪಟ್ಟಿಯಲ್ಲಿವೆ.

ಕ್ಯೂಸ್ ವರ್ಲ್ಡ್‌ ವಿಶ್ವವಿದ್ಯಾಲಯವು ಒಟ್ಟು 51 ವಿಷಯಗಳಿಗೆ ಅನುಸಾರವಾಗಿ 2021ರ ವಿಷಯವಾರು ರ‍್ಯಾಂಕಿಂಗ್ ಶ್ರೇಣಿಯನ್ನು ರೂಪಿಸಿದೆ. ಈ ವಿಶ್ವವಿದ್ಯಾಲಯವು ಪ್ರತಿವರ್ಷ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಗುಣಮಟ್ಟದ ಕಾಯ್ದುಕೊಳ್ಳುವಿಕೆ ಹಾಗೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವ ವಿಷಯಗಳನ್ನು ಒಳಗೊಂಡಿರುತ್ತವೆ. ಈ ಪಟ್ಟಿಯು ನಿರ್ದಿಷ್ಟ ಕ್ಷೇತ್ರಗಳಲ್ಲಿ ಉದ್ಯೋಗ ಅರಸುವ ಮತ್ತು ಸಂಶೋಧನಾ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿಶ್ವದ ಉತ್ತಮ ವಿಶ್ವವಿದ್ಯಾಲಯಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.