ADVERTISEMENT

ಕ್ವಿಕರ್‌ನಲ್ಲಿ ಸಾಕುಪ್ರಾಣಿ ಮಾರಾಟ, ಜಾಹೀರಾತು ಸ್ಥಗಿತ

ಏಜೆನ್ಸೀಸ್
Published 23 ಡಿಸೆಂಬರ್ 2020, 12:38 IST
Last Updated 23 ಡಿಸೆಂಬರ್ 2020, 12:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಆನ್‌ಲೈನ್‌ ಮಾರಾಟ ವೇದಿಕೆ ಕ್ವಿಕರ್‌ ತನ್ನ ಪೋರ್ಟಲ್‌ನಲ್ಲಿ ಸಾಕುಪ್ರಾಣಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ಪ್ರಾಣಿದಯಾ ಸಂಘ(ಪೇಟಾ) ಮಾಹಿತಿ ನೀಡಿದೆ.

ಆನ್‌ಲೈನ್‌ ಪೋರ್ಟಲ್‌ನಿಂದ ಸಾಕು ಪ್ರಾಣಿಗಳ ಮಾರಾಟವನ್ನು ನಿಲ್ಲಿಸುವಂತೆ ಸರ್ಕಾರೇತರ ಸಂಸ್ಥೆಯೊಂದು(ಎನ್‌ಜಿಒ) ಮನವಿ ಮಾಡಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳ ವ್ಯಾಪಾರ ಹಾಗೂ ಜಾಹೀರಾತುಗಳನ್ನು ಸ್ಥಗಿತಗೊಳಿಸಲು ಕ್ವಿಕರ್‌ ಮೇಲೆ ಒತ್ತಡವೂ ಹೆಚ್ಚಾಗಿತ್ತು ಎಂದು ಪೇಟಾ ಹೇಳಿದೆ.

'ಶ್ವಾನ ಸೇರಿದಂತೆ ಜೀವಂತ ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ಕ್ವಿಕರ್‌ ಅವಕಾಶ ನೀಡುತ್ತಿದೆ. ಇದು ಪ್ರಾಣಿ-ಕಲ್ಯಾಣ ನಿಯಮಗಳ ಉಲ್ಲಂಘನೆಗೆ ಕಾರಣವಾಗಿದೆ' ಎಂದು 2018ರಲ್ಲಿ ಎನ್‌ಜಿಒ ಆರೋಪಿಸಿತ್ತು.

ADVERTISEMENT

'ಶ್ವಾನ ಮಾರಾಟದ ಬಗೆಗಿನ ಜಾಹೀರಾತು ತೆಗೆದುಕೊಳ್ಳುವುದನ್ನು ಕ್ವಿಕರ್‌ ಮುಂದುವರೆಸಿತ್ತು. ಆದರೆ, ಮಂಗಳವಾರ ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಎಲ್ಲಾ ವಿವಾದಾತ್ಮಕ ಜಾಹೀರಾತುಗಳನ್ನು ಪೋರ್ಟಲ್‌ನಿಂದ ತೆಗೆದುಹಾಕಲಾಗಿದೆ ಎಂಬುದಾಗಿ ಎನ್‌ಜಿಒ ಸ್ಪಷ್ಟಪಡಿಸಿದೆ' ಎಂದು ಪೇಟಾ ತಿಳಿಸಿದೆ.

'ಪ್ರಾಣಿಗಳ ಮಾರಾಟಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಸ್ಥಗಿತಗೊಳಿಸಲಾಗಿದೆ. ಈ ರೀತಿಯ ಜಾಹೀರಾತುಗಳು ಕಂಡುಬಂದಲ್ಲಿ ಅವುಗಳನ್ನು ಪೋರ್ಟಲ್‌ನಿಂದ ತೆಗೆದುಹಾಕಲಾಗುವುದು. ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಆಹಾರ ಮತ್ತು ಪರಿಕರಗಳ ಮಾರಾಟದ ಜಾಹೀರಾತುಗಳನ್ನಷ್ಟೇ ಪೋಸ್ಟ್‌ ಮಾಡಬಹುದು ಎಂಬುದಾಗಿ ಕ್ವಿಕರ್‌ ಪೋರ್ಟಲ್‌ನಲ್ಲಿ ಬರೆಯಲಾಗಿದೆ' ಎಂದು ಪೇಟಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.