ADVERTISEMENT

ಕೋಲ್ಕತ್ತ: 2ನೇ ಸುತ್ತಿನ ಮಾತುಕತೆಯೂ ವಿಫಲ; ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ

ಪಿಟಿಐ
Published 19 ಸೆಪ್ಟೆಂಬರ್ 2024, 2:52 IST
Last Updated 19 ಸೆಪ್ಟೆಂಬರ್ 2024, 2:52 IST
<div class="paragraphs"><p>ಕಿರಿಯ ವೈದ್ಯರ ಪ್ರತಿಭಟನೆ(ಸಂಗ್ರಹ ಚಿತ್ರ)</p></div>

ಕಿರಿಯ ವೈದ್ಯರ ಪ್ರತಿಭಟನೆ(ಸಂಗ್ರಹ ಚಿತ್ರ)

   

ಕೋಲ್ಕತ್ತ: ಸರ್ಕಾರದೊಂದಿಗಿನ ಎರಡನೇ ಸುತ್ತಿನ ಮಾತುಕತೆಯೂ ವಿಫಲವಾದ ಹಿನ್ನೆಲೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕಿರಿಯ ವೈದ್ಯರು ಘೋಷಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಸುರಕ್ಷತೆಯ ಕುರಿತು ಸರ್ಕಾರ ಲಿಖಿತ ನಿರ್ದೇಶನಗಳನ್ನು ಹೊರಡಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದೆ.

ADVERTISEMENT

‘ನಮ್ಮ ಹೆಚ್ಚಿನ ಬೇಡಿಕೆಗಳು ನ್ಯಾಯಯುತವಾಗಿವೆ ಮತ್ತು ತಕ್ಷಣಕ್ಕೆ ಅನುಷ್ಠಾನ ತರುವ ಅಗತ್ಯವಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಮಾತುಕತೆಯ ಕೊನೆಯಲ್ಲಿ ಸಹಿ ಮಾಡಿದ ಲಿಖಿತ ದಾಖಲೆಗಳನ್ನು ನೀಡಲು ಮುಖ್ಯ ಕಾರ್ಯದರ್ಶಿ ಅವರು ನಿರಾಕರಿಸಿದಾಗ ನಾವು ನಿರಾಶೆಗೊಂಡೆವು’ ಎಂದು ಪ್ರತಿಭಟನೆಯ ನಡೆಸುತ್ತಿರುವ ವೈದ್ಯರಲ್ಲಿ ಒಬ್ಬರಾದ ಡಾ. ಅನಿಕೇತ್ ಮಹತೋ ಹೇಳಿದರು.

ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಆರೋಗ್ಯ ಕಾರ್ಯದರ್ಶಿ ಎನ್. ಎಸ್. ನಿಗಮ್ ವಿರುದ್ಧ ತನಿಖೆ ಆರಂಭಿಸಬೇಕೆಂಬ ವೈದ್ಯರ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರ ಹಿಂದೇಟು ಹಾಕಿದೆ.

ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ನೇತೃತ್ವದಲ್ಲಿ ಬುಧವಾರ ಕಿರಿಯ ವೈದ್ಯರ ನಿಯೋಗ ಎರಡನೇ ಸುತ್ತಿನ ಮಾತುಕತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.