ADVERTISEMENT

ಅಗ್ನಿ ಕ್ಷಿಪಣಿಯ ಪಿತಾಮಹ ಆರ್.ಎನ್ ಅಗರ್ವಾಲ್ ವಿಧಿವಶ

ಪಿಟಿಐ
Published 16 ಆಗಸ್ಟ್ 2024, 9:26 IST
Last Updated 16 ಆಗಸ್ಟ್ 2024, 9:26 IST
<div class="paragraphs"><p>ಆರ್.ಎನ್ ಅಗರ್ವಾಲ್</p></div>

ಆರ್.ಎನ್ ಅಗರ್ವಾಲ್

   

(ಚಿತ್ರ ಕೃಪೆ–@DRDO_India)

ಹೈದರಾಬಾದ್: ಅಗ್ನಿ ಕ್ಷಿಪಣಿಗಳ ಪಿತಾಮಹ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಆರ್.ಎನ್ ಅಗರ್ವಾಲ್ ಅವರು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ADVERTISEMENT

ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುವಾರ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮೂಲಗಳು ತಿಳಿಸಿವೆ.

ಭಾರತದ ದೂರಗಾಮಿ ಅಗ್ನಿ ಕ್ಷಿಪಣಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಗರ್ವಾಲ್ ನಿಧನಕ್ಕೆ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಆರ್‌ಡಿಒ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಅಗರ್ವಾಲ್ ಅವರು ಹೈದರಾಬಾದ್‌ನ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿಯ(ASL) ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

'ಮಿಸೈಲ್ ಮ್ಯಾನ್', ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಐಜಿಎಂಡಿಪಿ (ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಂ)ಅನ್ನು ಪ್ರಾರಂಭಿಸಿದ್ದರು. ಅಗ್ನಿ ಕ್ಷಿಪಣಿ ಅದರಲ್ಲಿ ಪ್ರಮುಖ ಯೋಜನೆಯಾಗಿತ್ತು. ಅಗ್ನಿ ಸರಣಿಯ ಕ್ಷಿಪಣಿಗಳನ್ನು ಪ್ರಾರಂಭಿಸುವಲ್ಲಿ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.