ADVERTISEMENT

ಲಡಾಖ್: ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಆರ್‌.ಕೆ ಮಾಥುರ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 6:50 IST
Last Updated 31 ಅಕ್ಟೋಬರ್ 2019, 6:50 IST
   

ಶ್ರೀನಗರ :ಲಡಾಖ್‌ನಮೊದಲಲೆಫ್ಟಿನೆಂಟ್ ಗವರ್ನರ್ಆಗಿ ರಾಧಾಕೃಷ್ಣ ಮಾಥುರ್‌ ಅವರುಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಲೆಹ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮ್ಮುಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಗೀತಾಮಿತ್ತಲ್ಅವರು ಮಾಥುರ್‌ಗೆ ಪ್ರಮಾಣ ವಚನ ಬೋಧಿಸಿದರು.

ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿಸಿಅಕ್ಟೋಬರ್ 31ರಂದು ಗೃಹ ಸಚಿವಾಲಯವು ಅಧಿಕೃತವಾಗಿ ಆದೇಶ ಹೊರಡಿಸಿದೆ.

2015ರಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದ1977ನೇ ತಂಡದ ಐಐಎಸ್ ಅಧಿಕಾರಿ ಮಾಥುರ್‌ ಅವರನ್ನು ಲಡಾಖ್ನಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ.

ADVERTISEMENT

ಗುಜರಾತ್‌ ಕ್ಯಾಡರ್‌ನಹಿರಿಯ ಐಎಎಸ್ಅಧಿಕಾರಿಗಿರೀಶ್ಚಂದ್ರಮುರ್ಮುಅವರುಜಮ್ಮುಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿಗುರುವಾರ ಶ್ರೀನಗರದಲ್ಲಿಅಧಿಕಾರ ಸ್ವೀಕರಿಸಲಿದ್ದಾರೆ.

ಕೇಂದ್ರಸರ್ಕಾರಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿಜಮ್ಮುಮತ್ತ ಕಾಶ್ಮೀರ,ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿಘೊಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.